ಶ್ರೀನಗರ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ತಾಯಿ ಗುಲ್ಶನ್ ನಸೀರ್ ಅವರು ಜಾರಿ ನಿರ್ದೇಶನಾಲಯದ(ಇ.ಡಿ) ಮುಂದೆ ಬುಧವಾರವಿಚಾರಣೆಗೆ ಹಾಜರಾದರು.

‘ಗುಲ್ಶನ್ ನಸೀರ್ ಅವರು ತಮ್ಮ ಮಗಳು ಮೆಹಬೂಬಾ ಮುಫ್ತಿ ಅವರೊಂದಿಗೆ ಇಲ್ಲಿನ ಇ.ಡಿ ಕಚೇರಿಗೆ ಬುಧವಾರ ಬಂದಿದ್ದರು’ ಎಂದು ಅಧಿಕಾರಿಗಳು ತಿಳಿಸಿದರು.

ಈ ಹಿಂದೆಯೂ ಮೂರು ಬಾರಿ ಗುಲ್ಶನ್ ನಸೀರ್‌ಗೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು.

ಮೆಹಬೂಬಾ ಮುಫ್ತಿ ಅವರ ಸಹಚರರೊಬ್ಬರ ಮನೆ ಮೇಲೆ ಇ.ಡಿ ದಾಳಿ ನಡೆಸಿದ್ದಾಗ, ಅಲ್ಲಿಂದ ಎರಡು ಡೈರಿಗಳನ್ನು ವಶಕ್ಕೆ ಪಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಇ.ಡಿ ಪ್ರಕರಣ ದಾಖಲಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಿಂದ ಹಣ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಮಾಹಿತಿಗಳು ಈ ಡೈರಿಯಲ್ಲಿ ಸಿಕ್ಕಿವೆ.

‘ಆ ನಿಧಿಯಿಂದ ಗುಲ್ಶನ್ ನಸೀರ್ ಮತ್ತು ಇತರರ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾಯಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಇ.ಡಿ ಗುಲ್ಶನ್ ಅವರನ್ನು ಪ್ರಶ್ನಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.