ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಶಾಲೆ ಜೊತೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನೂ ಆರಂಭಿಸಿ'

‘ವಿಶ್ವಸಂಸ್ಥೆ ಆಹಾರ ಕಾರ್ಯಕ್ರಮ‘ದ ಭಾರತದ ಘಟಕ ಒತ್ತಾಯ
Last Updated 31 ಜನವರಿ 2021, 8:30 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ದೇಶದಲ್ಲಿರುವ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಹೀಗಾಗಿ ಶಾಲೆಗಳು ಆರಂಭಗೊಂಡ ಬೆನ್ನಲ್ಲೇ ಈ ಯೋಜನೆಯನ್ನೂ ಆರಂಭಿಸುವಂತೆ ‘ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ’ದ (ಯುಎನ್‌ಡಬ್ಲ್ಯುಎಫ್‌ಪಿ ಇಂಡಿಯಾ) ಭಾರತದ ಘಟಕ ಒತ್ತಾಯಿಸಿದೆ.

ಕೋವಿಡ್‌ ಪಿಡುಗಿನಿಂದಾಗಿ ಲಾಕ್‌ಡೌನ್‌ ಹೇರಿದ ಕಾರಣ ಶಾಲೆಗಳು ಸಹ ಮುಚ್ಚಿದ್ದವು. ಆದರೆ, ಇಂಥ ಪಿಡುಗು, ಸಂಕಷ್ಟದ ಸಂದರ್ಭದಲ್ಲಿ ಸಹ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ ಸ್ಥಗಿತಗೊಂಡಿರಲಿಲ್ಲ ಎಂದು ಯುಎನ್‌ಡಬ್ಲ್ಯುಎಫ್‌ಪಿ ಇಂಡಿಯಾದ ನಿರ್ದೇಶಕ ಬಿಶೂ ಪರಾಜುಲಿ ಹೇಳಿದ್ದಾರೆ.

ತಾನು ಜಾರಿಗೊಳಿಸಿರುವ ಆಹಾರ ಭದ್ರತೆ ಯೋಜನೆಯಿಂದ ಇದು ಸಾಧ್ಯವಾಗಿದೆ ಎಂಬುದನ್ನು ಭಾರತ ಇಡೀ ಜಗತ್ತಿಗೇ ತೋರಿಸಿಕೊಟ್ಟಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT