ಬುಧವಾರ, ಜೂನ್ 29, 2022
23 °C

ಪುಲ್ವಾಮ: ಉಗ್ರರ ಅಡಗುತಾಣ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ಉಗ್ರರ ಶೋಧ ಕಾರ್ಯಾಚರಣೆಯಲ್ಲಿರುವ ಭದ್ರತಾ ಪಡೆ– ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೂರಾ ಅರಣ್ಯ ಪ್ರದೇಶದಲ್ಲಿ ಉಗ್ರರ ಎರಡು ಅಡಗು ತಾಣಗಳನ್ನು ಭದ್ರತಾ ಪಡೆಗಳು ಗುರುವಾರ ಪತ್ತೆ ಮಾಡಿವೆ. ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬದ್ರೂ ಅರಣ್ಯದಲ್ಲಿ ಲಷ್ಕರ್ ಎ ತೊಯಬಾ ಸಂಘಟನೆಯ ಉಗ್ರರು ನೆಲೆಯೂರಿರುವ ಖಚಿತ ಮಾಹಿತಿಯನ್ನು ಆಧರಿಸಿದ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಬುಧವಾರ ಕೈಗೊಂಡಿದ್ದವು. ಗುರುವಾರ ಬೆಳಗಿನ ಜಾವ ಅಡಗುತಾಣಗಳು ಪತ್ತೆಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 1900 ಸುತ್ತು ಎ.ಕೆ ಗುಂಡುಗಳು, ಎರಡು ಹ್ಯಾಂಡ್ ಗ್ರನೈಡ್, ಯುಬಿಜಎಲ್ ಥ್ರೋಯರ್‌ಗಳು ಪತ್ತೆಯಾಗಿವೆ. ಅವಂತಿಪೋರಾ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು