ಭಾನುವಾರ, ಏಪ್ರಿಲ್ 18, 2021
24 °C

2019ರ ಮಿಸ್‌ ಇಂಡಿಯಾ ಮಾನ್ಸಿ ಸೆಹಗಲ್‌ ಎಎಪಿಗೆ ಸೇರ್ಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ಮಿಸ್‌ ಇಂಡಿಯಾ ದೆಹಲಿ, ಮಾನ್ಸಿ ಸೆಹಗಲ್‌ ಅವರು ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

‘ಎಎಪಿ ನಾಯಕ ರಾಘವ್‌ ಛಡ್ಡಾ ಅವರ ಉಪಸ್ಥಿತಿಯಲ್ಲಿ ಮಾನ್ಸಿ ಸೆಹಗಲ್‌ ಅವರು ಪಕ್ಷಕ್ಕೆ ಸೇರಿದ್ದಾರೆ’ ಎಂದು ಎಎಪಿ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ.

‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಪ್ರಾಮಾಣಿಕ ಆಡಳಿತದಿಂದ ಪ್ರೇರಣೆಯಿಂದಾಗಿ, ನಾನು ಎಎಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ’ ಎಂದು ಮಾನ್ಸಿ ಸೆಹಗಲ್‌ ಹೇಳಿದರು.

‘ದೇಶದ ಪ್ರಗತಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಎರಡು ಸ್ತಂಭಗಳಿದ್ದಂತೆ. ಕಳೆದ ಕೆಲವು ವರ್ಷಗಳಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ’ ಎಂದು ಅವರು ಅಭಿ‍ಪ್ರಾಯಪಟ್ಟರು.
‘ಆಮ್ ಆದ್ಮಿ ಪಕ್ಷ ಮತ್ತು ಅರವಿಂದ ಕೇಜ್ರಿವಾಲ್‌ಗೆ ಯುವ ಜನತೆಯ ಮೇಲೆ ನಂಬಿಕೆಯಿದೆ. ಎಎಪಿ ಕುಟುಂಬವು ದಿನ ಕಳೆಯುತ್ತಿದ್ದಂತೆ ದೊಡ್ಡದಾಗುತ್ತಿದೆ. ನಮ್ಮ ಈ ಎಎಪಿ ಕುಟುಂಬಕ್ಕೆ ಮಾನ್ಸಿ ಸೆಹಗಲ್‌ ಅವರಿಗೂ ಸ್ವಾಗತ’ ಎಂದು ರಾಘವ್‌ ಛಡ್ಡಾ  ಹೇಳಿದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು