ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಪ್ರವಾಸದ ವೇಳೆ 65 ಗಂಟೆಗಳಲ್ಲಿ 20 ಸಭೆಗಳಲ್ಲಿ ಪಾಲ್ಗೊಂಡ ನರೇಂದ್ರ ಮೋದಿ

Last Updated 26 ಸೆಪ್ಟೆಂಬರ್ 2021, 17:21 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಅಮೆರಿಕ ಪ್ರವಾಸ ಶನಿವಾರಕ್ಕೆ ಮುಕ್ತಾಯವಾಯಿತು. ಅಮೆರಿಕದಲ್ಲಿದ್ದ 65 ಗಂಟೆಗಳಲ್ಲಿ ಅವರು 20 ಸಭೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅಮೆರಿಕಕ್ಕೆ ತೆರಳುವಾಗ ಮತ್ತು ಅಲ್ಲಿಂದ ವಾಪಸ್‌ ಬರುವಾಗ ವಿಮಾನದಲ್ಲಿ ಕೂಡ ಅಧಿಕಾರಿಗಳ ಜೊತೆ ನಾಲ್ಕು ಸುದೀರ್ಘವಾದ ಸಭೆಗಳನ್ನು ಅವರು ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತ ವಿವರಗಳನ್ನುಸರ್ಕಾರದ ಮೂಲಗಳು ನೀಡಿವೆ. ಬುಧವಾರ ಅಮೆರಿಕಕ್ಕೆ ತೆರಳುವ ವೇಳೆ ಅವರು ವಿಮಾನದಲ್ಲಿ ಎರಡು ಸಭೆಗಳನ್ನು ನಡೆಸಿದ್ದಾರೆ. ಗುರುವಾರ (ಸೆ.23) ಸಿಇಒಗಳ ಜೊತೆ ಐದು ಸಭೆಗಳನ್ನು ಅವರು ನಡೆಸಿದ್ದರು. ಅಮೆರಿಕ ಉಪಾಧ್ಯಕ್ಷೆ ಕಮಲಾಹ್ಯಾರಿಸ್‌ ಅವರ ಜೊತೆಯೂ ಸಭೆ ನಡೆಸಿದ್ದರು. ಅದೇ ದಿನ
ಜಪಾನ್‌ ಮತ್ತು ಆಸ್ಟ್ರೇಲಿಯ ಪ್ರಧಾನಿಗಳ ಜೊತೆ ದ್ವಿಪಕ್ಷೀಯ ಸಭೆ ನಡೆಸಿದ್ದರು.ಜೊತೆಗೆ, ಮೂರು ಆಂತರಿಕ ಸಭೆಗಳ ಅಧ್ಯಕ್ಷತೆಯನ್ನು ಮೋದಿ ವಹಿಸಿದ್ದರು.

ಮರುದಿನ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಜೊತೆ ದ್ವಿಪಕ್ಷೀಯ ಸಭೆ ನಡೆಸಿದ್ದರು ಮತ್ತು ಕ್ವಾಡ್‌ ಸಭೆಯಲ್ಲಿ ಭಾಗಿಯಾಗಿದ್ದರು. ಅದೇದಿನ ಅವರು ನಾಲ್ಕು ಇತರ ಆಂತರಿಕ ಸಭೆಗಳಲ್ಲೂ ಭಾಗವಹಿಸಿದ್ದರು. ಸೆ.25ರಂದು ಅವರು ಭಾರತಕ್ಕೆ ವಾಪಸಾದರು. ಅಲ್ಲಿಂದ ಹೊರಡುವ ಮುನ್ನ ಹೋಟೆಲ್‌ನಲ್ಲಿ ಮೂರು ಸಭೆಗಳನ್ನು ನಡೆಸಿದ್ದರು. ವಿಮಾನದಲ್ಲಿಯೂ ಎರಡು ಸಭೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

2 ಕಿ.ಮೀ ನಡೆದ ಮೋದಿ

ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಬಂದಿಳಿದ ಮೋದಿ ಅವರನ್ನು ಬಿಜೆಪಿ ಮುಖಂಡರು ಸ್ವಾಗತಿಸಿದರು. ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಇದ್ದರು. ವಿಮಾನ ನಿಲ್ದಾಣದ ಹೊರಗೆ ಕಾದಿದ್ದ ಪಕ್ಷದ ಕಾರ್ಯಕರ್ತರು ಮತ್ತು ಜನರನ್ನು ಭೇಟಿಯಾಗುತ್ತಾ ಮೋದಿ ಅವರು ಸುಮಾರು ಎರಡು ಕಿ.ಮೀ. ನಡೆದರು. ತಮ್ಮನ್ನು ಸ್ವಾಗತಿಸಲು ಬಂದ ಜನರಿಗೆ ಕೃತಜ್ಞತೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT