ನವದೆಹಲಿ: ಎಕನಾಮಿಕ್ಸ್ ಟೈಮ್ಸ್‌ನ ಮೋಹಿತ್ ಜೈನ್ ಅವರು ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ (ಐಎನ್‌ಎಸ್) ನೂತನ ಅಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಐಎನ್‌ಎಸ್‌ನ 82ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಡೆಪ್ಯುಟಿ ಪ್ರೆಸಿಡೆಂಟ್ ಆಗಿ ಕೆ.ರಾಜಪ್ರಸಾದ್ ರೆಡ್ಡಿ (ಸಾಕ್ಷಿ), ಉಪಾಧ್ಯಕ್ಷರಾಗಿ ರಾಕೇಶ್ ಶರ್ಮಾ (ಆಜ್ ಸಮಾಜ್), ಗೌರವ ಖಜಾಂಚಿಯಾಗಿ ತನ್ಮಯ್ ಮಹೇಶ್ವರಿ (ಅಮತ್ ಉಜಾಲಾ) ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೇರಿ ಪಾಲ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಗೆ ಕೆ.ಎನ್.ತಿಲಕಕುಮಾರ್ (ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಸಮೂಹದ ಮಾತೃಸಂಸ್ಥೆಯಾದ ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ), ಜಯಂತ್ ಎಂ.ಮ್ಯಾಥ್ಯೂ (ಮಲಯಾಳ ಮನೋರಮಾ), ಶಿವೇಂದ್ರ ಗುಪ್ತಾ (ಬಿಸಿನೆಸ್ ಸ್ಟ್ಯಾಂಡರ್ಡ್), ವಿವೇಕ್ ಗೋಯೆಂಕಾ (ದಿ ಇಂಡಿಯನ್ ಎಕ್ಸ್‌ಪ್ರೆಸ್), ಮಹೇಂದ್ರ ಮೋಹನ್ ಗುಪ್ತಾ (ದೈನಿಕ್ ಜಾಗರಣ್), ಎಂ.ವಿ.ಶ್ರೇಯಾಂಶ್‌ಕುಮಾರ್ (ಮಾತೃಭೂಮಿ) ಹಾಗೂ ಎಚ್.ಎನ್.ಕಾಮಾ (ಬಾಂಬೆ ಸಮಾಚಾರ್ ವೀಕ್ಲಿ) ಸೇರಿದಂತೆ 41 ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.