ಅವಧಿಗೆ ಮುನ್ನವೇ ಕೇರಳಕ್ಕೆ ಮುಂಗಾರು ಪ್ರವೇಶ

ನವದೆಹಲಿ: ನೈಋತ್ಯ ಮುಂಗಾರು ಈ ಬಾರಿ ವಾಡಿಕೆಗೆ ಮುನ್ನವೇ ಕೇರಳವನ್ನು ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.
‘ವಾಡಿಕೆಯಂತೆ ಜೂನ್ 1ಕ್ಕೆ ಮುಂಗಾರು ಕೇರಳ ಪ್ರವೇಶಿಸುತ್ತದೆ. ಪ್ರಸಕ್ತ ವರ್ಷ 5 ದಿನ ಮೊದಲೇ ಅಂದರೆ ಮೇ 27ರಂದೇ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಹಾಗೆಯೇ ನೈರುತ್ಯ ಮುಂಗಾರು ಮಾರುತವು ಮೇ 15ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಿ, ಮುಂದುವರಿಯಲು ಪೂರಕ ವಾತಾವರಣ ಸೃಷ್ಟಿಯಾಗುವ ನಿರೀಕ್ಷೆ ಇದೆ’ ಎಂದು ಐಎಂಡಿ ತಿಳಿಸಿದೆ.
ವಾಯುವ್ಯ ಭಾರತದ ಕೆಲ ಭಾಗಗಳಲ್ಲಿ ಬಿಸಿಲ ಧಗೆ ಹೆಚ್ಚುತ್ತಿರುವ ಸಮಯದಲ್ಲೇ ಅವಧಿಪೂರ್ವ ಮುಂಗಾರು ಆರಂಭದ ಸುಳಿವು ಲಭ್ಯವಾಗಿದೆ. 2009ರಲ್ಲಿ ನೈಋತ್ಯ ಮಾನ್ಸೂನ್ ಮೇ 23ರಂದು ಕೇರಳ ಪ್ರವೇಶಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.