ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ ಸಂಸದರೂ ಸೇರಿ 700ಕ್ಕೂ ಹೆಚ್ಚು ನಿರಾಶ್ರಿತರಿಗೆ ಮಿಜೋರಾಂ ಆಶ್ರಯ

Last Updated 28 ಜೂನ್ 2021, 2:46 IST
ಅಕ್ಷರ ಗಾತ್ರ

ಐಜ್ವಾಲ್: ಕಳೆದ ಕೆಲವು ವಾರಗಳಲ್ಲಿ ಮ್ಯಾನ್ಮಾರ್‌ನ 700ಕ್ಕೂ ಹೆಚ್ಚು ನಿರಾಶ್ರಿತರಿಗೆ ರಾಜ್ಯದಲ್ಲಿ ಆಶ್ರಯ ನೀಡಲಾಗಿದೆ ಎಂದು ಮಿಜೋರಾಂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಶ್ರಯ ಪಡೆದವರಲ್ಲಿ ಮ್ಯಾನ್ಮಾರ್ ನಾಗರಿಕರು, ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿದ್ದಾರೆ ಎಂದು ಅವರು ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಫೆಬ್ರುವರಿಯಲ್ಲಿ ನಡೆದ ಸೇನಾ ದಂಗೆಯ ಬಳಿಕ ಅಲ್ಲಿನ ಒಟ್ಟು 10,025 ಪ್ರಜೆಗಳು ಮಿಜೋರಾಂಗೆ ನುಸುಳಿದ್ದಾರೆ. ರಾಜ್ಯದಲ್ಲಿ ಆಶ್ರಯ ಪಡೆದವರ ಪೈಕಿ ಕನಿಷ್ಠ 22 ಮಂದಿ ಮ್ಯಾನ್ಮಾರ್‌ ಸಂಸತ್ ಸದಸ್ಯರೂ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಮ್ಯಾನ್ಮಾರ್‌ನ ಚಿನ್ ರಾಜ್ಯದ ಮುಖ್ಯಮಂತ್ರಿ ಸಲಾಯ್ ಲಿಯಾನ್ ಲುವಾಯಿ ಜೂನ್ 14ರಂದು ಮಿಜೋರಾಂಗೆ ಬಂದಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ಜೂನ್ 15ರಿಂದ 26ರ ಅವಧಿಯಲ್ಲಿ ಮ್ಯಾನ್ಮಾರ್‌ನ 195 ಮಂದಿ ಚಂಪಾಯಿ ಜಿಲ್ಲೆ ಪ್ರವೇಶಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಮಿಜೋರಾಂನ 11 ಜಿಲ್ಲೆಗಳ ಪೈಕಿ 10ರಲ್ಲಿ ಮ್ಯಾನ್ಮಾರ್ ನಿರಾಶ್ರಿತರು ವಾಸಿಸುತ್ತಿದ್ದಾರೆ. ಗಡಿ ಜಿಲ್ಲೆ ಚಂಪಾಯಿಯೊಂದರಲ್ಲೇ 4,352 ಮಂದಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT