ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌ | ನವಜಾತ ಶಿಶು ₹4.5 ಲಕ್ಷಕ್ಕೆ ಮಾರಾಟ, ತಾಯಿ ಸೇರಿ 11 ಮಂದಿ ಬಂಧನ

Last Updated 24 ಮಾರ್ಚ್ 2023, 8:46 IST
ಅಕ್ಷರ ಗಾತ್ರ

ರಾಂಚಿ: ಜಾರ್ಖಂಡ್‌ನಲ್ಲಿ ನವಜಾತ ಶಿಶುವನ್ನು 4.5 ಲಕ್ಷಕ್ಕೆ ಮಾರಾಟ ಮಾಡಿದ ತಾಯಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ತಿಳಿಸಿದ್ದಾರೆ.

ನವಜಾತ ಗಂಡು ಮಗುವನ್ನು ಹುಟ್ಟಿದ ತಕ್ಷಣ ತಾಯಿ ಮಾರಾಟ ಮಾಡಿರುವ ಘಟನೆ ಜಾರ್ಖಂಡ್‌ನ ಚಾತ್ರಾ ಜಿಲ್ಲೆಯಲ್ಲಿ ನಡೆದಿದೆ. ಮಗುವಿನ ತಾಯಿ ಆಶಾ ದೇವಿ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಚಾತ್ರಾ ಜಿಲ್ಲೆಯ ಪೊಲೀಸ್‌ ಆಯುಕ್ತ ಅಬು ಇಮ್ರಾನ್, ತಕ್ಷಣ ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಪ್ರವೃತ್ತರಾಗಿ 24 ಗಂಟೆಯೊಳಗೆ ಬೊಕರೊ ಜಿಲ್ಲೆಯಲ್ಲಿ ನವಜಾತ ಶಿಶುವನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆಶಾ ದೇವಿ ಬಳಿ ₹1 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ’ ಎಂದು ಉಪ–ವಿಭಾಗ ಪೊಲೀಸ್‌ ಅಧಿಕಾರಿ ಅವಿನಾಶ್‌ ಕುಮಾರ್ ಹೇಳಿದ್ದಾರೆ.

ಹಜಾರಿಬಾಗ್ ಜಿಲ್ಲೆಯ ಬಡ್ಕಗಾಂವ್ ಗ್ರಾಮದ ದಂಪತಿಗಳು ನವಜಾತ ಶಿಶುವಿನ ಖರೀದಿಗೆ ₹4.5 ಲಕ್ಷಕ್ಕೆ ಚಾತ್ರಾ ಮತ್ತು ಬೊಕಾರೊದ ಇಬ್ಬರು ದಲ್ಲಾಳಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ

ಮಗುವಿನ ತಾಯಿಗೆ ₹1 ಲಕ್ಷ ನೀಡಿ, ಉಳಿದ ₹3.5 ಲಕ್ಷವನ್ನು ದಲ್ಲಾಳಿಗಳು ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದರ್ ಆಸ್ಪತ್ರೆಯ ಉಪ ಅಧೀಕ್ಷಕ ವೈದ್ಯ ಮನೀಶ್ ಲಾಲ್ ಹೇಳಿಕೆ ಮೇರೆಗೆ ಚಾತ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT