ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಹಳೆಯ ವಿದ್ಯಾರ್ಥಿ: ಪಾಂಶುಪಾಲೆ ಸಾವು

Last Updated 25 ಫೆಬ್ರುವರಿ 2023, 16:15 IST
ಅಕ್ಷರ ಗಾತ್ರ

ಇಂದೋರ್‌: ಅಂಕಪಟ್ಟಿ ನೀಡಲು ವಿಳಂಬವಾಗಿದ್ದಕ್ಕೆ ಹಳೆಯ ವಿದ್ಯಾರ್ಥಿಯೊಬ್ಬ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ ಘಟನೆಯಲ್ಲಿ ಗಾಯಗೊಂಡಿದ್ದ ಇಲ್ಲಿನ ಬಿ.ಎಂ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ಡಾ. ವಿಮುಕ್ತ ಶರ್ಮಾ ಅವರು ಶನಿವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಶುತೋಷ್ ಶ್ರೀವಾಸ್ತವ (24) ಎಂಬ ವಿದ್ಯಾರ್ಥಿ ವಿಮುಕ್ತ ಅವರ ಮೇಲೆ ಇದೇ 20ರಂದು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ. ಇದರಿಂದ ಶೇ 80ರಷ್ಟು ಸುಟ್ಟ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರೋಪಿಯನ್ನು ಬಂಧಿಸಲಾಗಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಭಾಗವತ್‌ ಸಿಂಗ್‌ ವಿರ್ಡೆ ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ವಿದ್ಯಾರ್ಥಿ, 2022ರ ಜುಲೈನಲ್ಲಿ ಉತ್ತೀರ್ಣರಾದ ಬಿ.ಫಾರ್ಮಾ ಪರೀಕ್ಷೆಯ ಅಂಕಪಟ್ಟಿಯನ್ನು ಕಾಲೇಜು ಅಧಿಕಾರಿಗಳು ಹಸ್ತಾಂತರಿಸಲಿಲ್ಲ ಎಂದಿದ್ದಾನೆ. ಆದರೆ, ಕಾಲೇಜು ಆಡಳಿತ ಮಂಡಳಿಯು ಈ ಹೇಳಿಕೆಯನ್ನು ಸುಳ್ಳು ಎಂದಿದ್ದು, ಆತ ಕ್ರಿಮಿನಲ್ ಹಿ‌ನ್ನೆಲೆಯನ್ನು ಹೊಂದಿದ್ದಾನೆ. ಅಲ್ಲದೆ ಅಂಕಪಟ್ಟಿ ಸಂಗ್ರಹಿಸಲು ಪದೇ ಪದೇ ತಿಳಿಸಿದ್ದರೂ ಆತ ಅದನ್ನು ಸಂಗ್ರಹಿಸಿಕೊಳ್ಳಲಿಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT