ಸೋಮವಾರ, ಮೇ 23, 2022
21 °C

ಮುಂಗಾರು ಅಧಿವೇಶನ: 25 ಸಂಸದರಿಗೆ ಕೋವಿಡ್ ದೃಢ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

monsoon session

ನವದೆಹಲಿ: ಮುಂಗಾರು ಅಧಿವೇಶನದ ಸೋಮವಾರ ಆರಂಭವಾಗಿದ್ದು 25 ಸಂಸದರಿಗೆ ಕೋವಿಡ್-19 ದೃಢಪಟ್ಟಿರುವುದಾಗಿ ಸಂಸತ್ತಿನ ಅಧಿಕಾರಿಗಳು ಹೇಳಿದ್ದಾರೆ.

ಮೀನಾಕ್ಷಿ ಲೇಖಿ, ಅನಂತ ಕುಮಾರ್ ಹೆಗಡೆ ಮತ್ತು ಪರ್ವೇಶ್ ಸಾಹೀಬ್ ಸಿಂಗ್ ಸೇರಿದಂತೆ 17 ಸಂಸದರಿಗೆ ಕೋವಿಡ್ ದೃಢಪಟ್ಟಿದೆ. ಸೋಂಕಿತರಲ್ಲಿ 12 ಬಿಜೆಪಿ ಸಂಸದರು, ವೈಎಸ್‌ಆರ್ ಕಾಂಗ್ರೆಸ್‌ನ ಇಬ್ಬರು, ಶಿವಸೇನಾ, ಡಿಎಂಕೆ ಮತ್ತು ಆರ್‌ಎಲ್‌ಪಿ ಪಕ್ಷದಲ್ಲಿನ ಒಬ್ಬ ಸಂಸದನಿಗೆ ಕೋವಿಡ್ ಸೋಂಕು ತಗುಲಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು
 

ಇದನ್ನೂ ಓದಿಸಂಸದ ಅನಂತಕುಮಾರ್ ಹೆಗಡೆಗೆ ಕೋವಿಡ್

541 ಸದಸ್ಯರಿರುವ  ಲೋಕಸಭೆಯಲ್ಲಿ 359 ಮಂದಿ ಹಾಜರಾಗಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಿಯೇ ಹಾಜರಾಗಿದ್ದು ಕೋವಿಡ್ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು  ಪಾಲಿಸಿದ್ದರು.

ರಾಜ್ಯಸಭೆಯಲ್ಲಿ 8 ಸದಸ್ಯರಿಗೆ ಕೋವಿಡ್ ದೃಢಪಟ್ಟಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು