ಭಾನುವಾರ, ಏಪ್ರಿಲ್ 11, 2021
26 °C

ಅಂಬಾನಿ ಮನೆ ಬಳಿ ಸ್ಫೋಟಕ: ಎನ್‌ಐಎನಿಂದ ಸಚಿನ್‌ ವಾಜೆ ಕಾರಿನ ಹಳೆಯ ಮಾಲೀಕನ ತನಿಖೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ‌: ಎನ್‌ಐಎ ನಡೆಸುತ್ತಿರುವ ‘ಸ್ಕಾರ್ಪಿಯೊ ವಾಹನದಲ್ಲಿ ಸ್ಪೋಟಕಗಳು ತುಂಬಿದ್ದ ಪ್ರಕರಣ‘ದ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಮುಂಬೈ ಪೊಲೀಸ್ ಅಧಿಕಾರಿ ಸಚಿನ್‌ ವಾಜೆ ಬಳಸುತ್ತಿದ್ದ ಮರ್ಸಿಡಿಸ್‌ ಕಾರಿನ ಹಿಂದಿನ ಮಾಲೀಕರು ತಿಳಿಸಿದ್ದಾರೆ.

ವಾಜೆ ಬಳಸುತ್ತಿದ್ದ ಮರ್ಸಿಡಿಸ್ ಕಾರಿನ ಹಿಂದಿನ ಮಾಲೀಕ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸರನಾಶ್ ಭಾವ್ಸಾರ್. ‘ನಾನು ಕಳೆದ ತಿಂಗಳು ಈ ವಾಹನವನ್ನು ಆನ್‌ಲೈನ್‌ ಜಾಲತಾಣದ ಮೂಲಕ ಮಾರಾಟ ಮಾಡಿದ್ದೆ. ಆದರೆ ಯಾರು ಈ ವಾಹನ ಖರೀದಿಸಿದ್ದಾರೆಂದು ಗೊತ್ತಿಲ್ಲ‘ ಎಂದು ಭಾವ್ಸಾರ್ ಟಿವಿ ವಾಹನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ. 

‘ನನಗೆ ಸಚಿನ್‌ ವಾಜೆ ಯಾರು ಅಂತ ಗೊತ್ತಿಲ್ಲ. ಮಂಗಳವಾರ ಅವರ ಹೆಸರನ್ನು ಕೇಳಿದ ನಂತರವೇ, ಈ ಪ್ರಕರಣದ ವಿಚಾರ ಗೊತ್ತಾಯಿತು‘ ಎಂದು ಭಾವ್ಸಾರ್ ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳಾಗಲೀ ಅಥವಾ ಪೊಲೀಸರಾಗಲೀ ಭಾವ್ಸಾರ್ ಅವರನ್ನು ಇಲ್ಲಿವರೆಗೂ ಸಂಪರ್ಕಿಸಿಲ್ಲ.‘ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ತಾನು ಈ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಈಗಾಗಲೇ ಮಾರಾಟವಾಗಿರುವ ಕಾರಿಗೆ ಸಂಬಂಧಿಸಿದ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ನೀಡುತ್ತೇನೆ‘ ಎಂದು ಭರವಸೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು