ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಹುಲ್ ಚೋಕ್ಸಿಯನ್ನು ಕರೆತರಲು ಡೊಮಿನಿಕಾಗೆ ಸಿಬಿಐ ಡಿಐಜಿ ನೇತೃತ್ವದ ತಂಡ

Last Updated 1 ಜೂನ್ 2021, 16:25 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ಸಿಬಿಐ ಡಿಐಜಿ ನೇತೃತ್ವದ ತಂಡವು ಡೊಮಿನಿಕಾಗೆ ತೆರಳಿದೆ.

ಅಲ್ಲಿನ ನ್ಯಾಯಾಲಯವು ಗಡಿಪಾರು ಮಾಡಲು ಅವಕಾಶ ನೀಡಿದರೆ, ಭಾರತದ ತಂಡವು ಬಂಧಿತ ಚೋಕ್ಸಿಯನ್ನು ಭಾರತಕ್ಕೆ ಕರೆತರಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಡೊಮಿನಿಕಾದ ಹೈಕೋರ್ಟ್‌ನಲ್ಲಿ ಚೋಕ್ಸಿ ಪ್ರಕರಣದ ವಿಚಾರಣೆಯು ಬುಧವಾರ ನಡೆಯಲಿದೆ (ಸ್ಥಳೀಯ ಕಾಲಮಾನ). ಸಿಬಿಐನ ಇಬ್ಬರು ಅಧಿಕಾರಿಗಳು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳು ಡೊಮಿನಿಕಾ ತಲುಪಿದ್ದಾರೆ.

2018ರಿಂದ ಆಂಟಿಗುವಾ ಮತ್ತು ಬಾರ್ಬುಡಾ ಪ್ರಜೆಯಾಗಿ ನೆಲೆಸಿರುವ ಚೋಕ್ಸಿ, ಮೇ 23ರಂದು ಅಲ್ಲಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಬಾರ್ಬುಡಾದ ಪಕ್ಕದ ಡೊಮಿನಿಕಾಗೆ ಅಕ್ರಮ ಪ್ರವೇಶ ಪಡೆದ ಕಾರಣ ಅವರನ್ನು ಬಂಧಿಸಲಾಗಿತ್ತು.

₹ 13,500 ಕೋಟಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಚೋಕ್ಸಿ ಭಾರತದಿಂದ ತಲೆಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT