ಮಂಗಳವಾರ, ಜನವರಿ 18, 2022
27 °C

ಮಹಾರಾಷ್ಟ್ರದಲ್ಲಿ 36,265 ಕೋವಿಡ್ ಪ್ರಕರಣ, ಮುಂಬೈನಲ್ಲೇ 20,181

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ನಿನ್ನೆಗೆ ಹೋಲಿಸಿದರೆ ಇಂದು ಮುಂಬೈನಲ್ಲಿ ಶೇಕಡ 33 ರಷ್ಟು ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, 24 ಗಂಟೆಗಳಲ್ಲಿ 20,181 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇಂದು 4 ಮಂದಿ ಮೃತಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 79,260ಕ್ಕೆ ಏರಿದೆ.

ಇದರಲ್ಲಿ ಶೇಕಡ 85 ರಷ್ಟು ಮಂದಿಗೆ ಯಾವುದೇ ರೋಗಲಕ್ಷಣಗಳಿಲ್ಲ ಎಂದು ಎಎನ್‌ಐ ಟ್ವೀಟ್ ಮಾಡಿದೆ. 1,170 ಮಂದಿ ನಗರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, 106 ಮಂದಿಗೆ ಕೃತಕ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ.

 

ಇನ್ನು, ಮಹಾರಾಷ್ಟ್ರದಲ್ಲಿ 36,265 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 13 ಜನರ ಸಾವು ಸಂಭವಿಸಿವೆ. 8,907 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 79 ಓಮೈಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಓಮೈಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 876ಕ್ಕೆ ಏರಿದೆ. ಇದರಲ್ಲಿ 381 ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,14,847ಕ್ಕೆ ಜಿಗಿದಿದೆ.

 

 

ಮುಂಬೈ ಮಹಾನಗರದಲ್ಲಿ ಹೆಚ್ಚು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸಹ ಕೋವಿಡ್‌ಗೆ ತುತ್ತಾಗುತ್ತಿದ್ದಾರೆ. ನಗರದ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆಯಲ್ಲಿ 150 ಕ್ಕೂ ಹೆಚ್ಚು ವೈದ್ಯರಿಗೆ ಕೋವಿಡ್ ದೃಢಪಟ್ಟಿದೆ. ಸಿಯಾನ್ ಆಸ್ಪತ್ರೆಯಲ್ಲಿ 80 ಜನರಿಗೆ ಕೋವಿಡ್ ಆಗಿದೆ. ಮಹಾರಾಷ್ಟ್ರ ರಾಜ್ಯದಾದ್ಯಂತ ಇದುವರೆಗೆ 260 ಕ್ಕೂ ಹೆಚ್ಚು ವೈದ್ಯರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಸ್ಥಾನಿಕ ವೈದ್ಯರ ಸಂಘ ತಿಳಿಸಿದೆ ಎಂದು ಎನ್‌ಡಿಟಿವಿ ವರದಿಮಾಡಿದೆ. ನಗರದ ಸಾರ್ವಜನಿಕ ಸಾರಿಗೆ ಸೇವೆಯ 60 ಉದ್ಯೋಗಿಗಳಿಗೂ ಕೋವಿಡ್ ಆಗಿದೆ ಎಂದು ವರದಿಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು