ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಂತೆ ಮುಂಬೈ ಗಾಳಿ ಕೂಡ ಕಲುಷಿತವಾಗಲಿದೆ: ತಜ್ಞರ ಎಚ್ಚರಿಕೆ

Last Updated 12 ಡಿಸೆಂಬರ್ 2022, 10:21 IST
ಅಕ್ಷರ ಗಾತ್ರ

ಮುಂಬೈ: ದೆಹಲಿಯಂತೆ ಮುಂಬೈನಲ್ಲೂ ಗಾಳಿ ಕಲುಷಿತಗೊಳ್ಳುತ್ತಿದ್ದು, ಸೋಮವಾರ ವಾಯು ಗುಣಮಟ್ಟ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಮುಂಬರುವ ವರ್ಷಗಳ ಚಳಿಗಾಲದಲ್ಲಿ ಇಲ್ಲಿನ ಗಾಳಿ ಅತ್ಯಂತ ಕಲುಷಿತವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇಂದಿನ ವಾಯು ಗುಣಮಟ್ಟ ಕುಸಿತ ಮ್ಯಾಂಡಸ್‌ ಚಂಡಮಾರುತದ ಪರಿಣಾಮವಾಗಿರಬಹುದು. ಆದರೆ ಮುಂಬರುವ ದಿನಗಳಲ್ಲಿ ಗುಣಮಟ್ಟ ಇನ್ನಷ್ಟು ಕುಸಿಯಲಿದೆ. ನ. 1ರಿಂದ ಡಿ.10 ರವರೆಗೆ 40 ದಿನಗಳಲ್ಲಿ ಮುಂಬೈನ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ದರ್ಜೆಯಲ್ಲಿದೆ. ಕಳೆದ ವರ್ಷ ಈ ಅವಧಿಯಲ್ಲಿ ಗುಣಮಟ್ಟ ಕಳಪೆಯಾಗಿತ್ತು ಎಂದು ವರದಿ ಹೇಳಿದೆ.

ಕಳೆದ ವರ್ಷ 18 ದಿನಗಳ ಕಾಲ ಗುಣಮಟ್ಟ ಸೂಚ್ಯಂಕ ಪಿಎಂ–2.5 ವ್ಯಾಪ್ತಿಯಲ್ಲಿತ್ತು. ಈ ವರ್ಷ ಕೇವಲ ಒಂದು ದಿನ ಮಾತ್ರ ಗಾಳಿ ಗುಣಮಟ್ಟ ಈ ಪ್ರಮಾಣದಲ್ಲಿದೆ. ಉಳಿದ ದಿನಗಳಲ್ಲಿ ಅತ್ಯಂತ ಕಳಪೆ ಪ್ರಮಾಣ ದಾಖಲಾಗಿದೆ. ಮಲಾಡ್‌, ಚೆಂಬೂರ್‌ ಮತ್ತು ಮಜಗಾನ್‌ಗಳಲ್ಲಿ ವಾಯುವಿನ ಗುಣಮಟ್ಟ ಅತ್ಯಂತ ನಿಕೃಷ್ಟವಾಗಿದೆ. ನವಿ ಮುಂಬೈ ಮತ್ತು ವರೋಲಿಗಳಲ್ಲಿ ಗುಣಮಟ್ಟ ಉತ್ತಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT