ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಹಿನ್ನೆಲೆ ಹೊಂದಿರುವ ನನಗೆ ಸೇವೆ ಸಲ್ಲಿಸಲು ಜನರು ಅವಕಾಶ ನೀಡಿದರು: ಮೋದಿ

Last Updated 15 ಅಕ್ಟೋಬರ್ 2021, 8:58 IST
ಅಕ್ಷರ ಗಾತ್ರ

ಸೂರತ್‌: 'ಯಾವುದೇ ಜಾತಿ, ರಾಜಕೀಯ ಕುಟುಂಬ ಹಿನ್ನಲೆ ಇಲ್ಲದ ಸಾಮಾನ್ಯ ಹಿನ್ನೆಲೆ ‘ಹೊಂದಿರುವ ನನಗೆ ಜನರು ಮೊದಲ ಬಾರಿಗೆ ಗುಜರಾತ್‌ ರಾಜ್ಯದಲ್ಲಿ, ನಂತರ ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿನ ಬಾಲಕರ ವಸತಿ ನಿಲಯಕ್ಕೆ ವರ್ಚುವಲ್ ಕಾರ್ಯಕ್ರಮದ ಮೂಲಕ ಶಿಲಾನ್ಯಾಸ ನೆರವೇರಿಸಿದ ನಂತರ ಮಾತನಾಡಿದ ಅವರು, ‘ನಾನು ತುಂಬಾ ಸಾಮಾನ್ಯ ವರ್ಗದ ಹಿನ್ನೆಲೆಯಿಂದ ಬಂದಿದ್ದೇನೆ. ನನಗೆ ಯಾವುದೇ ರಾಜಕೀಯ ಅಥವಾ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲ. ಜಾತಿ ಆಧಾರಿತ ರಾಜಕೀಯದ ಬೆಂಬಲವನ್ನು ಹೊಂದಿಲ್ಲ’ ಎಂದು ಹೇಳಿದರು.

‘ಈ ಎಲ್ಲ ಅಂಶಗಳ ಹೊರತಾಗಿಯೂ ನೀವು ನನ್ನನ್ನು ಹಾರೈಸಿ, 2001 ರಲ್ಲಿ ಗುಜರಾತ್ ಸೇವೆ ಮಾಡುವ ಅವಕಾಶವನ್ನು ಒದಗಿಸಿದಿರಿ‘ ಎಂದು ಮೋದಿ ನೆನಪಿಸಿಕೊಂಡರು. ‘ನಿಮ್ಮ ಆಶೀರ್ವಾದದ ಶಕ್ತಿ, 20 ವರ್ಷಗಳ ನಂತರವೂ ನಾನು ಸೇವೆ ಸಲ್ಲಿಸುವಂತೆ ಮಾಡಿದೆ. ಮೊದಲು ನಾನು ಗುಜರಾತ್ ರಾಜ್ಯದ ಸೇವಕನಾಗಿದ್ದೆ, ಈಗ ದೇಶದ ಜನರಿಗೆ ಸೇವೆ ಸಲ್ಲಿಸುತ್ತಿದ್ದೇನೆ‘ ಎಂದು ಅವರು ಹೇಳಿದರು.

‘ಭಾರತದ ಮೊದಲ ಗೃಹ ಸಚಿವ ಮತ್ತು ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ತೋರಿರುವ ದಾರಿಯಲ್ಲಿ ಸಾಗುವಂತೆ‘ ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದರು.

‘ಸರ್ದಾರ್ ಪಟೇಲರು ಹೇಳಿದಂತೆ, ಜಾತಿ ಮತ್ತು ಧರ್ಮದ ಮೇಲಿನ ನಂಬಿಕೆ, ನಮಗೆ ತೊಡಕಾಗಬಾರದು. ನಾವೆಲ್ಲರೂ ಭಾರತದ ಪುತ್ರರು ಮತ್ತು ನಾವೆಲ್ಲರೂ ನಮ್ಮ ದೇಶವನ್ನು ಪ್ರೀತಿಸಬೇಕು, ಪರಸ್ಪರ ಪ್ರೀತಿಸಬೇಕು‘ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT