ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ–ಬೈಡನ್‌ ದೂರವಾಣಿ ಕರೆ: ಲಸಿಕೆ ಕಚ್ಚಾ ಸಾಮಗ್ರಿ ಪೂರೈಕೆ ಭರವಸೆ

Last Updated 26 ಏಪ್ರಿಲ್ 2021, 21:14 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಯಲ್ಲಿ ಮಾತುಕತೆ ನಡೆಸಿದ್ದು, ಕೋವಿ ಶೀಲ್ಡ್‌ ಲಸಿಕೆ ತಯಾರಿಕೆಗೆ ಅಗತ್ಯವಾದ ಕಚ್ಚಾ ಸಾಮಗ್ರಿ ಪೂರೈಸುವ ಭರವಸೆ ನೀಡಿದ್ದಾರೆ.

ವೆಂಟಿಲೇಟರ್‌ಗಳು, ಥೆರೊಪೆಟಿಕ್ಸ್‌ನಂತಹ ಸಾಮಗ್ರಿಗಳನ್ನೂ ತ್ವರಿತವಾಗಿ ಪೂರೈಸುವುದಾಗಿ ಬೈಡನ್‌ ಭರವಸೆ ನೀಡಿದರು ಎಂದು ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.‌

ಭಾರತದಲ್ಲಿ ಎದುರಾಗಿರುವ ಎರಡನೇ ಅಲೆಯ ಕೋವಿಡ್ ಪರಿಸ್ಥಿತಿ ಯನ್ನು ನಿಭಾಯಿಸುವ ನಿಟ್ಟಿನಲ್ಲಿ ಉಭಯ ನಾಯಕರು ಚರ್ಚಿಸಿದರು. ಈ ನಿಟ್ಟಿನಲ್ಲಿ ಲಸಿಕೆ ಮಾತ್ರವಲ್ಲದೆ, ಇತರ ಔಷಧಗಳು, ವೈದ್ಯಕೀಯ ಉಪಕರಣ ಗಳನ್ನು ತ್ವರಿತವಾಗಿ ಭಾರತಕ್ಕೆ ರವಾನಿಸ ಬೇಕಾದ ಅಗತ್ಯವನ್ನು ಮೋದಿ ಅವರು ವಿವರಿಸಿದರು.

ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಬೌದ್ಧಿಕ ಹಕ್ಕುಸ್ವಾಮ್ಯ ಸಂಬಂಧಿತ ವ್ಯಾಪಾರ ವಿಷಯಗಳ (ಟಿಆರ್‌ಐಪಿಎಸ್‌) ನಿಯಮಗಳನ್ನು ಸಡಿಲಗೊಳಿಸಿ, ಅಭಿವೃದ್ಧಿ ಹೊಂದು ತ್ತಿರುವ ರಾಷ್ಟ್ರಗಳಿಗೆ ತ್ವರಿತವಾಗಿ ಲಸಿಕೆಗಳು ಮತ್ತು ಔಷಧಗಳು ಲಭಿಸು ವಂತೆ ಮಾಡುವ ನಿಟ್ಟಿನಲ್ಲಿ ಭಾರತ ಕೈಗೊಂಡಿರುವ ಪ್ರಯತ್ನಗಳನ್ನು ಮೋದಿ ಅವರು ಬೈಡನ್‌ ಅವರಿಗೆ ಮನವರಿಕೆ ಮಾಡಿದರು.

ಈ ಸಂಕಷ್ಟದ ಕಾಲದಲ್ಲಿ ಭಾರತಕ್ಕೆ ತ್ವರಿತವಾಗಿ ನೆರವು ನೀಡಲು ಮುಂದಾಗಿರುವ ಅಮೆರಿಕಕ್ಕೆ ಪ್ರಧಾನಿ ಅವರು ಧನ್ಯವಾದ ಹೇಳಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT