ಗುರುವಾರ , ಮೇ 13, 2021
17 °C

₹ 3000 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ ನೌಕಾಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ಬಳಸುತ್ತಿದ್ದ ಬೃಹತ್ ದೋಣಿಯಿಂದ ₹ 3000 ಕೋಟಿ ಮೌಲ್ಯದ ಮಾದಕವಸ್ತುವನ್ನು ನೌಕಾಪಡೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಮಾದಕ ವಸ್ತುಗಳನ್ನು ವಿದೇಶದಿಂದ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

ರಕ್ಷಣಾ ಇಲಾಖೆಯ ವಕ್ತಾರರ ಪ್ರಕಾರ, ಅರಬ್ಬಿ ಸಮುದ್ರದಲ್ಲಿ ಗಸ್ತು ಕಾರ್ಯದಲ್ಲಿ ಇದ್ದ ನೌಕಾಪಡೆಯ ಹಡಗು ‘ಸುವರ್ಣ’ದ ಸಿಬ್ಬಂದಿ, ಶಂಕಾಸ್ಪದ ಎನಿಸಿದ ದೋಣಿಯನ್ನು ತಪಾಸಣೆ ನಡೆಸಿದಾಗ ಕೃತ್ಯ ಗೊತ್ತಾಗಿದೆ.

ತನಿಖೆಯ ಭಾಗವಾಗಿ ಸಿಬ್ಬಂದಿ ದೋಣಿಯನ್ನು ತಪಾಸಣೆಗೆ ಒಳಪಡಿಸಿದರು. ಆಗ ಸುಮಾರು 300 ಕೆ.ಜಿ ಮಾದಕವಸ್ತುಗಳು ಪತ್ತೆಯಾಯಿತು. ದೋಣಿ ಮತ್ತು ಅದರ ಸಿಬ್ಬಂದಿಯನ್ನು ಸಮೀಪದ ಬಂದರು ಕೊಚ್ಚಿಗೆ ಕರೆತರಲಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಆದರೆ, ಮಾದಕವಸ್ತುವಿದ್ದ ದೋಣಿ ಪತ್ತೆಯಾದ ಖಚಿತ ಸ್ಥಳದ ವಿವರವನ್ನು ಅವರು ನೀಡಲಿಲ್ಲ. ಹಣ ಮತ್ತು ಪ್ರಮಾಣ ಹೊರತಾಗಿ, ಮಾದಕ ವಸ್ತುವಿನ ಕಳ್ಳಸಾಗಣೆಯ ಮಾರ್ಗದ ದೃಷ್ಟಿಯಿಂದ ಇದೊಂದು ದೊಡ್ಡ ಮಟ್ಟದ ದಾಳಿ. ಬಲೂಚಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಮಕ್ರನ್‌ ತೀರ ಭಾಗದಿಂದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಇದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು