ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ್ಚಿರೋಲಿ: ನಕ್ಸಲರಿಗೆ ಬಾಂಬ್‌ ಕಚ್ಚಾ ವಸ್ತು ಪೂರೈಸುತ್ತಿದ್ದ ನಾಲ್ವರ ಬಂಧನ

Last Updated 20 ಫೆಬ್ರುವರಿ 2022, 16:24 IST
ಅಕ್ಷರ ಗಾತ್ರ

ಗಡ್ಚಿರೋಲಿ: ಬಾಂಬ್‌ಸ್ಫೋಟ ಮತ್ತು ಅದರ ತಯಾರಿಕೆಗೆ ಅಗತ್ಯ ವಸ್ತುಗಳನ್ನು ನಕ್ಸಲರಿಗೆ ಪೂರೈಕೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಇಲ್ಲಿನ ಪೊಲೀಸರು ನಾಲ್ವರು ನಕ್ಸಲ್‌ ಸಹಚರರನ್ನು ಬಂಧಿಸಿದ್ದಾರೆ.

ದಾಮ್ರಾಂಚ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮಧ್ಯರಾತ್ರಿ ಬಂಗಾರ್‌ಪೇಟೆ ಗ್ರಾಮದ ಬಳಿ ನಕ್ಸಲ್ ಸಹಚರರ ಗುಂಪು ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿರುವಾಗಲೇ ನಕ್ಸಲ್‌ ವಿರೋಧ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಒಬ್ಬ ತಪ್ಪಿಸಿಕೊಂಡಿರುವುದಾಗಿ ಭಾನುವಾರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತೆಲಂಗಾಣದಿಂದ ಛತ್ತೀಸಗಡಕ್ಕೆ ಸರಬರಾಜು ಆಗುತ್ತಿದ್ದ 3,500 ಮೀಟರ್‌ ಉದ್ದದ 10 ಬಂಡಲ್‌ ಕಾರ್ಡೆಕ್ಸ್‌ ತಂತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಬ್ಯಾರೇಲ್‌ ಗ್ರೆನೇಡ್ ಲಾಂಚರ್‌ ಮತ್ತು ಕೈನಿಂದ ಎಸೆಯುವ ಗ್ರೆನೇಡ್‌ ಮತ್ತು ಸುಧಾರಿತಸ್ಫೋಟಕ ಸಾಧನಗಳ ತಯಾರಿಕೆಯಲ್ಲಿಬಳಸಲಾಗುತ್ತಿತ್ತು ಎಂದು ಗಡ್ಚಿರೋಲಿಯ ಎಸ್ಪಿ ಅಂಕಿತ್‌ ಗೋಯಲ್‌ ತಿಳಿಸಿದ್ದಾರೆ.

ಇದೇ ಗಡ್ಚಿರೋಲಿ ಜಿಲ್ಲೆಯಲ್ಲಿ ಕಳೆದ ವರ್ಷ ನವಂಬರ್‌ನಲ್ಲಿ ಪೊಲೀಸರು ಎನ್‌ಕೌಂಟರ್‌ ಮೂಲಕ 26 ನಕ್ಸಲರನ್ನು ಕೊಂದು ಹಾಕಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT