ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾಲ್ಯಾಂಡ್: ಎನ್‌ಡಿಪಿಪಿ–ಬಿಜೆಪಿ 30 ಕ್ಷೇತ್ರಗಳಲ್ಲಿ ಮುನ್ನಡೆ

Last Updated 2 ಮಾರ್ಚ್ 2023, 7:24 IST
ಅಕ್ಷರ ಗಾತ್ರ

ಕೊಹಿಮಾ: ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯ 59 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಮೈತ್ರಿಕೂಟ 30ರಲ್ಲಿ ಮುನ್ನಡೆ ಪಡೆದಿದೆ.

ಅಕುಲುಟೊ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಯೇ ಇಲ್ಲದ್ದರಿಂದ ಬಿಜೆಪಿ ಅಭ್ಯರ್ಥಿ ಕಝೊಟೊ ಕಿಮಿನಿ ಗೆಲುವು ಸಾಧಿಸಿದ್ದು, ಟ್ಯುಸಾಂಗ್ ಕ್ಷೇತ್ರದಲ್ಲಿ ಬಿಜೆಪಿ ಭಾಷಾಂಗ್ಮೊಂಗ್ಬಾ ಅವರು ಎನ್‌ಸಿಪಿಯ ಟೊಯನ್ ಚಾಂಗ್ ವಿರುದ್ಧ 5,644 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಮಧ್ಯಾಹ್ನ 12ರ ಹೊತ್ತಿಗೆ 60 ಕ್ಷೇತ್ರಗಳ ಪೈಕಿ 55 ಟ್ರೆಂಡ್ ಲಭ್ಯವಾಗಿದ್ದು, ನ್ಯಾಷಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯು(ಎನ್‌ಡಿಪಿಪಿ) 20 ಕ್ಷೇತ್ರಗಳಲ್ಲಿ ಮತ್ತು ಮಿತ್ರ ಪಕ್ಷ ಬಿಜೆಪಿ 10 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದವು. 40:20ರ ಅನುಪಾತದಲ್ಲಿ ಸೀಟುಗಳ ಹಂಚಿಕೆ ಮಾಡಿಕೊಂಡು ಎನ್‌ಡಿಪಿಪಿ ಮತ್ತು ಬಿಜೆಪಿ ಸ್ಪರ್ಧಿಸಿದ್ದವು.

ಮುಖ್ಯಮಂತ್ರಿ ನೆಫಿಯು ರಿಯೊ, ಉಪ ಮುಖ್ಯಮಂತ್ರಿ ವೈ. ಪಟ್ಟೋನ್ ಮುನ್ನಡೆ ಪಡೆದಿದ್ದಾರೆ.

ಎನ್‌ಡಿಪಿಪಿಯ 4 ಮಹಿಳಾ ಅಭ್ಯರ್ಥಿಗಳ ಪೈಕಿ ಇಬ್ಬರು ದಿಮಾಪುರ ಮತ್ತು ಪಶ್ಚಿಮ ಅಂಗಾಮಿ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ಪಕ್ಷೇತರ ಮತ್ತು ಎನ್‌ಸಿಪಿ ಅಭಯರ್ಥಿಗಳು ತಲಾ 5 ಕ್ಷೇತ್ರಗಳಲಲ್ಲಿ ಮುನ್ನಡೆಯಲ್ಲಿದ್ದಾರೆ. ಆರ್‌ಪಿಐ 2, ಎಲ್‌ಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT