ಮಂಗಳವಾರ, ಜನವರಿ 26, 2021
28 °C

ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಸ್ಥಿರತೆಗೆ ಭಾರತ ಪಾತ್ರ ಮಹತ್ವದ್ದು: ಜಸ್ಟರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ:  ಹಿಂದೂಮಹಾಸಾಗರ (ಇಂಡೊ)–‍ಪೆಸಿಫಿಕ್‌ ಪ್ರದೇಶದಲ್ಲಿ ಸ್ಥಿರತೆ ಬೇಕು. ಅಭಿವೃದ್ಧಿ, ಪ್ರಜಾತಂತ್ರ ಮೌಲ್ಯಗಳನ್ನಾಧರಿಸಿದ ಪ್ರಭುತ್ವದ ಅಗತ್ಯವೂ ಇದೆ. ಇದು ಸಾಕಾರಗೊಳ್ಳಲು ಭಾರತದ ಪಾತ್ರ ಮಹತ್ವದ್ದು ಎಂದು ಭಾರತದಲ್ಲಿ ಅಮೆರಿಕದ ರಾಯಭಾರಿ ಕೆನ್ನೆತ್‌ ಜಸ್ಟರ್‌ ಪ್ರತಿಪಾದಿಸಿದ್ದಾರೆ.

ರಾಯಭಾರಿ ಹುದ್ದೆಯಿಂದ ನಿರ್ಗಮಿಸಲಿರುವ ಅವರು, ಬೀಳ್ಕೊಡುಗೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಇಂಡೊ–ಪೆಸಿಫಿಕ್‌ ಪ್ರದೇಶದ ವ್ಯಾಪ್ತಿಯ ದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಹೊಸ ಮಾರ್ಗಸೂಚಿಗಳ ಅವಶ್ಯಕತೆ ಇದೆ’ ಎಂದರು.

ಅವರು ಭಾರತದಲ್ಲಿ ರಾಯಭಾರಿಯಾಗಿ 2017ರ ನವೆಂಬರ್‌ 3ರಂದು ನೇಮಕಗೊಂಡಿದ್ದರು.

‘ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧ ವಿಶಾಲ ತಳಹದಿ ಮೇಲೆ ನಿಂತಿದೆ. ದೃಢವೂ ಇದೆ. ವಿಶ್ವದಲ್ಲಿ ಬೇರೆ ಯಾವ ದೇಶಗಳ ನಡುವೆಯೂ ಇಂಥ ದ್ವಿಪಕ್ಷೀಯ ಸಂಬಂಧ ಇಲ್ಲ’ ಎಂದೂ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.