ಗುರುವಾರ , ಆಗಸ್ಟ್ 18, 2022
25 °C

ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದ 9 ಜನರ ನಿಗೂಢ ಸಾವು: ಆತ್ಮಹತ್ಯೆ ಶಂಕೆ

ಮೃತ್ಯುಂಜಯ್ ಬೋಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಒಂದೇ ಕುಟುಂಬದ 9 ಮಂದಿ ನಿಗೂಢವಾಗಿ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಹಸಿಲ್‌ನ ಮ್ಹೈಸಾಲ್ ಗ್ರಾಮದಲ್ಲಿ ನಡೆದಿದೆ.

ವಿಷಪ್ರಾಶನದಿಂದ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಆತ್ಮಹತ್ಯೆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಸಾಂಗ್ಲಿ ಪೊಲೀಸರು ಹೇಳಿದ್ದಾರೆ.

ಮೃತರನ್ನು ಅಕ್ಕಟಾಯ್ ವಮೊರ್, ಆಕೆಯ ಮಕ್ಕಳಾದ ಡಾ. ಮಾಣಿಕ್ ಯಲ್ಲಪ್ಪ ವಮೊರ್ ಮತ್ತು ಪೊಪಟ್ ಯಲ್ಲಪ್ಪ ವಮೊರ್, ಮಾಣಿಕ್ ಪತ್ನಿ ರೇಖಾ ಮಾಣಿಕ್ ವಮೊರ್, ಅವರ ಮಕ್ಕಳಾದ ಪ್ರತಿಮಾ ವಮೊರ್ ಮತ್ತು ಆದಿತ್ಯ ವಮೊರ್, ಪೊಪಟ್ ಪತ್ನಿ ಅರ್ಚನಾ ವಮೊರ್, ಪೊಪಟ್ ಮಗಳು ಸಂಗೀತಾ ವಮೊರ್, ಮಗ ಶುಭಂ ವಮೊರ್ ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅದಿಕಾರಿಗಳು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮೀರಜ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು