ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದಿದ್ದರೆ ಮದ್ಯವಿಲ್ಲ, ಸಂಬಳವಿಲ್ಲ!

ಉತ್ತರ ಪ್ರದೇಶದ ಇಟಾವಾ ಮತ್ತು ಫಿರೋಜಾಬಾದ್‌ ಜಿಲ್ಲಾಡಳಿತಗಳ ನಿರ್ಧಾರ
Last Updated 30 ಮೇ 2021, 13:40 IST
ಅಕ್ಷರ ಗಾತ್ರ

ಲಖನೌ: ಕೋವಿಡ್‌ ಲಸಿಕೆ ಅಭಿಯಾನವನ್ನು ಉತ್ತೇಜಿಸುವ ದೃಷ್ಟಿಯಿಂದ ಉತ್ತರ ಪ್ರದೇಶದ ಇಟಾವ ಜಿಲ್ಲೆಯ ಅಧಿಕಾರಿಗಳು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಮದ್ಯ ಮಾರಾಟ ಮಾಡದಂತೆ ಅಧಿಕಾರಿಗಳು ಮದ್ಯದಂಗಡಿಯ ಮಾಲೀಕರಿಗೆ ನಿರ್ದೇಶನ ನೀಡಿದ್ದಾರೆ.

45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮದ್ಯ ಮಾರಾಟ ಮಾಡುವುದಕ್ಕೂ ಮೊದಲು ಅವರ ವ್ಯಾಕ್ಸಿನೇಷನ್ ಕಾರ್ಡ್ ಕೇಳುವಂತೆ ಮದ್ಯದಂಗಡಿ ಮಾಲೀಕರಿಗೆ ಇಟವಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಹೆಮ್ ಸಿಂಗ್ ಹೇಳಿದ್ದಾರೆ.

ಇಟಾವಾ ಪಟ್ಟಣದಲ್ಲಿ ಮದ್ಯದಂಗಡಿಗಳ ತಪಾಸಣೆ ನಡೆಸಿದ ಸಿಂಗ್, ಸರದಿಯಲ್ಲಿ ನಿಂತಿದ್ದವರನ್ನು ಲಸಿಕೆ ಪಡೆದಿರುವ ಬಗ್ಗೆ ಪ್ರಶ್ನೆ ಮಾಡಿದರು. ಲಸಿಕೆ ಪಡೆಯದವರನ್ನು ಅಲ್ಲಿಂದ ಕಳುಹಿಸಿದರು ಎಂದು ವರದಿಯಾಗಿದೆ.

'ಮದ್ಯದಂಗಡಿಯ ಮಾಲೀಕರು ನಿಯಮ ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ನಾನು ಆಗಾಗ ಪರಿಶೀಲಿಸುತ್ತಿರುತ್ತೇನೆ,' ಎಂದು ಸಿಂಗ್‌ ತಿಳಿಸಿದ್ದಾರೆ.

ಇನ್ನೊಂದೆಡೆ, ಲಸಿಕೆ ಪಡೆದ ನಂತರವೇ ಫಿರೋಜಾಬಾದ್‌ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ನೌಕರರಿಗೆ ಸಂಬಳ ನೀಡಲಾಗುವುದು ಎಂದು ತಿಳಿಸಲಾಗಿದೆ. ಆದರೆ, 45 ವರ್ಷ ಮೇಲ್ಪಟ್ಟವರಿಗೆಲ್ಲ ಲಸಿಕೆ ನೀಡಲು ಜಿಲ್ಲಾಡಳಿತದ ಬಳಿ ಸಾಕಷ್ಟು ಲಸಿಕೆ ಇದೆಯೇ ಎಂಬುದು ಖಚಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT