ಮಂಗಳವಾರ, ಅಕ್ಟೋಬರ್ 26, 2021
20 °C

ಸ್ಮಾರ್ಟ್‌ ಆರೋಗ್ಯ ಕಾರ್ಡ್ ಯೋಜನೆಗೆ ಚಾಲನೆ ನೀಡಿದ ಒಡಿಶಾ ಮುಖ್ಯಮಂತ್ರಿ ಪಟ್ನಾಯಕ್

ಪಿಟಿಐ Updated:

ಅಕ್ಷರ ಗಾತ್ರ : | |

ಭುವನೇಶ್ವರ: ರಾಜ್ಯದ ʼಬಿಜು ಸ್ವಸ್ಥ್ಯ ಕಲ್ಯಾಣ ಯೋಜನೆʼಯ (ಬಿಎಸ್‌ಕೆವೈ) ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸುವ ಕಾರ್ಯಕ್ರಮಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಗಜಪತಿ ಜಿಲ್ಲೆಯಲ್ಲಿ ಚಾಲನೆ ನೀಡಿದ್ದಾರೆ.

ಗಜಪತಿ ಜಿಲ್ಲೆಯ ಪಾರ್ಲಖೆಮುಂಡಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪಟ್ನಾಯಕ್‌, ಈ ಯೋಜನೆಯಿಂದಾಗಿ ಜಿಲ್ಲೆಯ 1.35 ಲಕ್ಷ ಬಿಎಸ್‌ಕೆವೈ ಫಲಾನುಭವಿಗಳಿಗೆ ನೆರವಾಗಲಿದ್ದು, ಚಿಕಿತ್ಸೆ ಸಂದರ್ಭದಲ್ಲಿ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಮುಂದುವರಿದು, ʼಜನರು ಚಿಕಿತ್ಸೆ ವೆಚ್ಚ ಭರಿಸುವ ಸಲುವಾಗಿ ಚಿನ್ನ, ಭೂಮಿ ಮಾರಾಟ ಮಾಡುತ್ತಿದ್ದರು. ಅಂತಹ ಸುದ್ದಿಗಳು ಗಮನಕ್ಕೆ ಬಂದಾಗ ನೋವಾಗುತ್ತದೆ. ಇದೀಗ ಫಲಾನುಭವಿಗಳು ಈ ಕಾರ್ಡ್‌ಗಳನ್ನು ಬಳಸಿಕೊಂಡು ದೇಶದ 200ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಪಡೆಯಬಹುದಾಗಿದೆʼ ಎಂದು ತಿಳಿಸಿದ್ದಾರೆ.

ರಾಜ್ಯದ ಸಾರ್ವತ್ರಿಕ ಆರೋಗ್ಯ ಯೋಜನೆಯಾಗಿರುವ ಬಿಎಸ್‌ಕೆವೈ ಫಲಾನುಭವಿಗಳಿಗೆ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸುವುದಾಗಿ ಈ ವರ್ಷದ ಸ್ವತಂತ್ರ್ಯೋತ್ಸವದ ವೇಳೆ ಪಟ್ನಾಯಕ್‌ ಘೋಷಿಸಿದ್ದರು.

ಇದಕ್ಕೂ ಮೊದಲು ಮಲ್ಕಾನ್‌ಗಿರಿ, ಸುಂದರ್‌ಗಡ ಮತ್ತು ಬೊಲಾಂಗೀರ್‌ಗಳಲ್ಲಿ ಕಾರ್ಡ್‌ ವಿತರಣೆಗೆ ಚಾಲನೆ ನೀಡಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು