ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಗೇಮ್‌ನಿಂದ ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿ ಎಂದ ಪೋಷಕರು: ಸಮೀಕ್ಷೆ

ಪಿಯರ್‌ಸನ್‌ ಗ್ಲೋಬಲ್ ಲರ್ನರ್ ಸರ್ವೇಯಲ್ಲಿ ಪೋಷಕರ ಅಭಿಪ್ರಾಯ
Last Updated 5 ಜೂನ್ 2022, 13:45 IST
ಅಕ್ಷರ ಗಾತ್ರ

ನವದೆಹಲಿ: ವಿಡಿಯೊ ಗೇಮ್‌ ಮತ್ತು ಸಾಮಾಜಿಕ ಮಾಧ್ಯಮಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿವೆ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಪಿಯರ್‌ಸನ್‌ ಗ್ಲೋಬಲ್ ಲರ್ನರ್ ಸರ್ವೇ ಕಳೆದ ಏಪ್ರಿಲ್‌ನಲ್ಲಿ ಈ ಸಮೀಕ್ಷೆ ಕೈಗೊಂಡಿದೆ. ಅದರಲ್ಲಿ ಜಾಗತಿಕವಾಗಿ ಶೇ 28ರಷ್ಟು ಪೋಷಕರು ಸಾಮಾಜಿಕ ಮಾಧ್ಯಮ ತಮ್ಮ ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ. ಶೇ 40ರಷ್ಟು ಪೋಷಕರು ವಿಡಿಯೊ ಗೇಮ್‌ಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಶೇ 27ರಷ್ಟು ಮಂದಿ ವರ್ಚುವಲ್‌ ಕಲಿಕೆ ಮಕ್ಕಳ ಮೇಲೆ ರಚನಾತ್ಮಕ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.ಶೇ 80ರಷ್ಟು ಮಂದಿ ಶಾಲೆಗಳು ಆನ್‌ಲೈನ್‌ ಅಥವಾ ವರ್ಚುವಲ್‌ ತರಗತಿಯನ್ನು ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.

ಶೇ 92ರಷ್ಟು ಪೋಷಕರು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಶಾಲೆಗಳೇ ಉಚಿತವಾಗಿ ಮಾನಸಿಕ ಆರೋಗ್ಯ ಸೇವೆ ಒದಗಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 26ರಷ್ಟು ಮಂದಿ ಪ್ರಾಥಮಿಕ ಶಾಲೆಯಿಂದಲೇ ಮಕ್ಕಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯಲ್ಲಿ ಭಾರತ, ಅಮೆರಿಕ, ಬ್ರಿಟನ್‌ ಮತ್ತು ಚೀನಾದ 3,100 ಮಂದಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT