ಗುರುವಾರ , ಜೂನ್ 30, 2022
23 °C
ಒಡಿಶಾದಲ್ಲಿ ಬರಡು ಭೂಮಿಯನ್ನ ಹಸಿರಾಗಿಸಿದವರು

ಪದ್ಮಶ್ರೀ ಪುರಸ್ಕೃತ ಪರಿಸರವಾದಿ ಪ್ರೊ.ರಾಧಾಮೋಹನ್ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಪದ್ಮಶ್ರೀ ಪುರಸ್ಕೃತ ಪರಿಸರವಾದಿ ಮತ್ತು ಒಡಿಶಾದ ಮಾಜಿ ಮಾಹಿತಿ ಆಯುಕ್ತ ಪ್ರೊ. ರಾಧಾಮೋಹನ್ (78) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅವರಿಗೆ ಮೂವರು ಪುತ್ರಿಯರಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ರಾಧಾ ಮೋಹನ್ ಅವರಿಗೆ ಕೆಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಗಾಂಧಿವಾದಿ ರಾಧಾ ಮೋಹನ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರ‍ಪತಿ ರಾಮ್‌ನಾಥ್ ಕೋವಿಂದ್ ಅವರು, ‘ಪ್ರೊಫೆಸರ್ ರಾಧಾಮೋಹನ್ ಅವರು ಪರಿಸರವಾದಿ ಜತೆಗೆ, ಅರ್ಥಶಾಸ್ತ್ರಜ್ಞರನ್ನು ಪ್ರೋತ್ಸಾಹಿಸುತ್ತಿದ್ದರು. ಬಹುದೊಡ್ಡ ವಿದ್ವಾಂಸರಾಗಿದ್ದ ಅವರು ಪ್ರಕೃತಿ ಮತ್ತು ಮಾನವೀಯ ತೆಯನ್ನು ಶ್ರೀಮಂತಗೊಳಿಸಲು ಸಾವಯವ ಕೃಷಿಯತ್ತ ಹೆಜ್ಜೆ ಹಾಕಿದರು‘ ಎಂದು ಟ್ವೀಟ್‌ ಮಾಡಿದ್ದಾರೆ.

ನಯಾಗಡ ಜಿಲ್ಲೆಯ ಪುಟ್ಟ ಹಳ್ಳಿಯೊಂದರಲ್ಲಿ 1943ರಲ್ಲಿ ಜನಿಸಿದ ರಾಧಾಮೋಹನ್ ಪುರಿಯ ಎಸ್‌ಸಿಎಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು, ಅಪ್ಲೈಡ್ ಎಕನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪದವಿ ಕಲಿತ ಪುರಿಯ ಎಸ್‌ಸಿಎಸ್‌ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ನಿವೃತ್ತಿಯಾದ ನಂತರ, ರಾಜ್ಯ ಸರ್ಕಾರ ಇವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಿತ್ತು.

ಸುಸ್ಥಿರ ಹಾಗೂ ಸಾವಯವ ಕೃಷಿ ರೈತರಲ್ಲಿ ಅರಿವು ಮೂಡಿಸುವುದಕ್ಕಾಗಿ ‘ಸಂಭವ್‌‘ ಎಂಬ ಸ್ವಯಂ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಿದ್ದರು.

ಒಡಿಶಾದ ನಯಾಗಡ ಜಿಲ್ಲೆಯಲ್ಲಿರುವ ಬರಡು ಭೂಮಿಯನ್ನು ಮೂವತ್ತು ವರ್ಷಗಳ ಕಾಲ ಹಸಿರಾಗಿಸಿದ ಪ್ರೊ. ರಾಧಾ ಮೋಹನ್ ಮತ್ತು ಅವರ ಪುತ್ರಿ ಸಬರಮತಿ ಇಬ್ಬರಿಗೂ ಕಳೆದ ವರ್ಷ ಭಾರತದ ಸರ್ಕಾರ ‘ಪದ್ಮಶ್ರೀ‘ ಪ್ರಶಸ್ತಿ ನೀಡಿ ಗೌರವಿಸಿತ್ತು.

ರಾಧಾ ಮೋಹನ್ ಅವರು ಪರಿಸರ ಸೇವೆಯನ್ನು ಗೌರವಿಸಿದ ವಿಶ್ವ ಸಂಸ್ಥೆ (ಯುಎನ್‌ಇಪಿ) 'ದಿ ಗ್ಲೋಬಲ್ ರೋಲ್ ಆಫ್ ಆನರ್' ನೀಡಿ ಗೌರವಿಸಿತ್ತು. ಒಡಿಶಾ ಸರ್ಕಾರ ಪ್ರೊಫೆಸರ್ ಅವರ ಅತ್ಯುತ್ತಮ ಸಾಮಾಜಿಕ ಸೇವೆಗಾಗಿ ‘ಉಟ್ಕಲ್ ಸೇವಾ ಸಮ್ಮಾನ್‘  ಪ್ರಶಸ್ತಿ ನೀಡಿ ಗೌರವಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು