ಶನಿವಾರ, ನವೆಂಬರ್ 28, 2020
18 °C

ಸೀತೆಯನ್ನು ರುಬಿಯಾಳನ್ನಾಗಿ ಪರಿವರ್ತಿಸಲು ಸಂಚು: ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್‌

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಭೋಪಾಲ್‌: ಸೀತೆಯನ್ನು ರುಬಿಯಾಳನ್ನಾಗಿ ಪರಿವರ್ತಿಸಲು ಪಾಕಿಸ್ತಾನ ಮತ್ತು ಐಎಸ್‌ಐ ಏಜೆಂಟರು ಸಂಚು ರೂಪಿಸಿದ್ದಾರೆ ಎಂದು ಮಧ್ಯಪ್ರದೇಶ ವಿಧಾನಸಭೆಯ ಹಂಗಾಮಿ ಸ್ಪೀಕರ್‌ ರಾಮೇಶ್ವರ್ ಶರ್ಮಾ ತಿಳಿಸಿದ್ದಾರೆ.

ಲವ್ ಜಿಹಾದ್‌ಗೆ ಸಂಬಂಧಿಸಿದ ಕಾಯ್ದೆಯ ವಿಚಾರವಾಗಿ ಎಎನ್ಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿರುವ ಅವರು, 'ಸೀತೆಯನ್ನು ರುಬಿಯಾಳನ್ನಾಗಿ ಪರಿವರ್ತಿಸಲು ಪಾಕಿಸ್ತಾನ ಮತ್ತು ಐಎಸ್‌ಐ ಏಜೆಂಟರು ಸಂಚು ರೂಪಿಸಿದ್ದಾರೆ. ನಾವು ಎಷ್ಟು ಸಮಯದವರೆಗೆ ಸೀತೆಯನ್ನು ರುಬಿಯಾ ಆಗಲು ಬಿಡಬೇಕು? ನರ್ಗಿಸ್ ಮತ್ತು ಸುನಿಲ್‌ ದತ್ ಅವರಂತಹ ನಿಜವಾದ ಪ್ರೀತಿಯನ್ನು ನನಗೆ ತೋರಿಸಿ. ಎಷ್ಟು ನರ್ಗಿಸ್‌ಗಳು ಸುನಿಲ್ ದತ್‌ರನ್ನು ಮದುವೆಯಾದರು ಹೇಳಿ?' ಎಂದು ಶರ್ಮಾ ಪ್ರಶ್ನಿಸಿದ್ದಾರೆ.

ಲವ್ ಜಿಹಾದ್ ಪ್ರಕರಣಗಳ ಕಡಿವಾಣಕ್ಕೆ ಕಾಯ್ದೆ ರೂಪಿಸಲು ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ಉದ್ದೇಶಿತ ಕಾಯ್ದೆಯ ಅನುಸಾರ, ಲವ್‌ ಜಿಹಾದ್‌ ಪ್ರಕರಣಗಳ ಅಪರಾಧವು ಜಾಮೀನುರಹಿತವಾಗಿದ್ದು, ಗರಿಷ್ಠ 5 ವರ್ಷ ಸಜೆ ವಿಧಿಸಲು ಅವಕಾಶ ಇರಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು