ನವದೆಹಲಿ: ಅಗ್ನಿವೀರರ ಮೊದಲ ಬ್ಯಾಚ್‌ನ ನಿರ್ಗಮನ ಪಥ ಸಂಚಲನವು ಮಾರ್ಚ್ 28ರಂದು ಐಎನ್‌ಎಸ್ ಚಿಲ್ಕಾದಲ್ಲಿ ನಡೆಯಲಿದೆ ಎಂದು ನೌಕಾಪಡೆಯು ಶನಿವಾರ ತಿಳಿಸಿದೆ.
ಸಾಂಪ್ರದಾಯಿಕವಾಗಿ ನಿರ್ಗಮನ ಪಥಸಂಚಲನವು (ಪಿಒಪಿ) ಬೆಳಿಗ್ಗೆ ನಡೆಯುತ್ತದೆ. ಆದರೆ, ಭಾರತೀಯ ಸಶಸ್ತ್ರ ಪಡೆಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಿರ್ಗಮನ ಪಥಸಂಚಲನವು ಸೂರ್ಯಾಸ್ತದ ಬಳಿಕ ನಡೆಯಲಿದೆ ಎಂದೂ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ನೌಕಾಪಡೆಯ ಮುಖ್ಯಸ್ಥ ಆಡ್ಮಿರಲ್ ಆರ್. ಹರಿಕುಮಾರ್ ಅವರು ಮುಖ್ಯ ಅತಿಥಿಯಾಗಿ ಹಾಗೂ ನಿರ್ಗಮನ ಪಥಸಂಚಲನದ ಪರಿಶೀಲನಾ ಅಧಿಕಾರಿಯಾಗಿ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದ್ದಾರೆ.
273 ಮಹಿಳಾ ಅಗ್ನಿವೀರರು ಸೇರಿದಂತೆ ಒಟ್ಟು 2,600 ಅಗ್ನಿವೀರರು ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.