ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಮಧ್ಯಸ್ಥಿಕೆ ಇಲ್ಲದೆ ಲಸಿಕೆ ಮಾರಾಟಕ್ಕೆ ಕಂಪನಿಗಳ ಹಿಂದೇಟು: ಕೇಜ್ರಿವಾಲ್‌

Last Updated 24 ಮೇ 2021, 11:00 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ಔಷಧ ತಯಾರಿಕ ವಲಯದ ದಿಗ್ಗಜ ಕಂಪನಿಗಳಾದ ಫಿಜರ್ ಮತ್ತು ಮೊಡೆರ್ನಾಗಳು ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆಗಳನ್ನು ದಿಲ್ಲಿಗೆ ನೇರವಾಗಿ ಮಾರಟ ಸಾಧ್ಯವಿಲ್ಲ ಎಂದು ಕಂಪನಿಗಳು ತಿಳಿಸಿವೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಕೋವಿಡ್‌ ಲಸಿಕೆ ಕೊರತೆ ಹಿನ್ನೆಲೆ 18-44 ವಯೋಮಾನದವರಿಗೆ ಲಸಿಕೆ ನೀಡುವ ಕಾರ್ಯವನ್ನು ಸ್ಥಗಿತಗೊಳಿಸಿದ ಬಳಿಕ ಮಾತನಾಡಿದ ಕೇಜ್ರಿವಾಲ್, ವಿದೇಶಿ ಔಷಧೀಯ ಕಂಪನಿಗಳು ಲಸಿಕೆ ಮಾರಾಟದ ವ್ಯವಹಾರಗಳನ್ನು ಕೇಂದ್ರ ಸರ್ಕಾರದದ ಜೊತೆಗಷ್ಟೇ ನಡೆಸುತ್ತಿವೆ ಎಂದು ಒತ್ತಿ ಹೇಳಿದ್ದಾರೆ.

ಲಸಿಕೆ ತರಿಸಿಕೊಳ್ಳುವ ವಿಚಾರವಾಗಿ ರಾಜ್ಯ ಸರ್ಕಾರ ಫಿಜರ್ ಮತ್ತು ಮೊಡೆರ್ನಾ ಕಂಪನಿಗಳ ಜೊತೆ ಮಾತುಕತೆ ನಡೆಸಿದೆ. ಆದರೆ ಎರಡು ಕಂಪನಿಗಳು ನೇರವಾಗಿ ನಮಗೆ ಮಾರಾಟ ಮಾಡಲು ನಿರಾಕರಿಸಿವೆ. ಕೇಂದ್ರ ಸರ್ಕಾರದ ಜೊತೆಗಷ್ಟೇ ವ್ಯವಹಾರ ನಡೆಸುವುದಾಗಿ ಸ್ಪಷ್ಟಪಡಿಸಿವೆ. ನಾವು ಕೇಂದ್ರ ಸರ್ಕಾರದ ಬಳಿ ತುರ್ತು ಅಗತ್ಯವಿರುವ ಲಸಿಕೆಗಳನ್ನು ಖರೀದಿಸಲು ಸಹಕರಿಸುವಂತೆ ವಿನಂತಿಸಿಕೊಂಡಿದ್ದೇವೆ ಎಂದು ಕೇಜ್ರಿವಾಲ್ ‌ಸುದ್ದಿಗಾರರಿಗೆ ವಿವರಿಸಿದ್ದಾರೆ.

ಅಮೆರಿಕದ ಮೊಡೆರ್ನಾ ಕಂಪನಿಯು ಲಸಿಕೆಗಳನ್ನು ನೇರವಾಗಿ ಕಳುಹಿಸಿಕೊಡಲು ನಿರಾಕರಿಸಿದ್ದರ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಸರ್ಕಾರ ದಿನದ ಹಿಂದಷ್ಟೇ ಹೇಳಿಕೆ ನೀಡಿದ್ದರು. ವಿದೇಶಿ ಕಂಪನಿಗಳಿಂದ ನೇರವಾಗಿ ಲಸಿಕೆಗಳನ್ನು ಖರೀದಿಸಲು ಅಮರಿಂದರ್ ಸರ್ಕಾರವೂ ಪ್ರಯತ್ನ ನಡೆಸಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಪತ್ರ ಬರೆದಿರುವ ಅರವಿಂದ ಕೇಜ್ರಿವಾಲ್‌, ಪ್ರತಿ ತಿಂಗಳು ದೆಹಲಿಗೆ 80 ಲಕ್ಷ ಡೋಸ್‌ಗಳು ಬೇಕು. ಆದರೆ ಮೇ ತಿಂಗಳಲ್ಲಿ ಕೇವಲ 16 ಲಕ್ಷ ಡೋಸ್‌ಗಳು ಸಿಕ್ಕಿವೆ. ಜೂನ್‌ ತಿಂಗಳಲ್ಲಿ 8 ಲಕ್ಷ ಡೋಸ್‌ಗಳು ಮಾತ್ರ ಸಿಕ್ಕಿವೆ. ಕೇಂದ್ರ ಸರ್ಕಾರವು ವಿದೇಶಿ ಲಸಿಕೆ ತಯಾರಿಕಾ ಕಂಪನಿಗಳ ಜೊತೆ ತುರ್ತಾಗಿ ಮಾತನಾಡುವ ಮೂಲಕ ಅಗತ್ಯ ಡೋಸ್‌ಗಳನ್ನು ತರಿಸಿ ರಾಜ್ಯಗಳಿಗೆ ಹಂಚಬೇಕು. ಆದರೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಅನಗತ್ಯ ಜಗಳಗಳು ಸಂಭವಿಸುತ್ತಿವೆ ಎಂದು ಪತ್ರದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT