ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌.ಡಿ ಕಡ್ಡಾಯಕ್ಕೆ 2 ವರ್ಷ ವಿನಾಯಿತಿ

Last Updated 12 ಅಕ್ಟೋಬರ್ 2021, 20:51 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವವಿದ್ಯಾಲಯಗಳಲ್ಲಿನ ಸಹಾಯಕಪ್ರಾಧ್ಯಾಪಕರ ನೇರ ನೇಮಕಾತಿಯ ಅರ್ಹತೆಗಾಗಿ ನಿಗದಿ ಪಡಿಸಲಾಗಿದ್ದ ಪಿಎಚ್‌.ಡಿ ಕಡ್ಡಾಯ ಮಾನದಂಡ ಅನ್ವಯವಾಗುವ ದಿನಾಂಕವನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಎರಡು ವರ್ಷಗಳವರೆಗೆ ವಿಸ್ತರಿಸಿದೆ.

ಕೋವಿಡ್‌ ಪಿಡುಗನ್ನು ಗಮನದಲ್ಲಿಟ್ಟುಕೊಂಡು ಯುಜಿಸಿ ಈ ನಿರ್ಧಾರ ತೆಗೆದುಕೊಂಡಿದೆ.

ವಿಶ್ವವಿದ್ಯಾಲಯಗಳ ವಿಭಾಗಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ 2021ರ ಜುಲೈ 1ರಿಂದ ಪಿಎಚ್‌.ಡಿ ಅನ್ನು ಕಡ್ಡಾಯಗೊಳಿಸಲಾಗಿತ್ತು. ಈ ನಿಯಮ ಜಾರಿಯನ್ನು 2023ರ ಜುಲೈ 1ರವರೆಗೆ ಮುಂದೂಡಿರುವುದಾಗಿ ಯುಜಿಸಿ ಪ್ರಕಟಣೆ ಮಂಗಳವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT