ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದೌನ್‌ ಜಾಮಾ ಮಸೀದಿ ಶಿವ ದೇಗುಲವಾಗಿತ್ತು: ನ್ಯಾಯಾಲಯಕ್ಕೆ ವಕೀಲರ ಹೇಳಿಕೆ

ಪೂಜೆ ಸಲ್ಲಿಸಲು ಅವಕಾಶ ಕೋರಿ ಕೋರ್ಟ್‌ಗೆ ಅರ್ಜಿ
Last Updated 3 ಸೆಪ್ಟೆಂಬರ್ 2022, 13:45 IST
ಅಕ್ಷರ ಗಾತ್ರ

ಬದೌನ್‌ (ಉತ್ತರ ಪ್ರದೇಶ): ಇಲ್ಲಿನ ಜಾಮಾ ಮಸೀದಿ ಶಂಸಿಯು ಶಿವನ ದೇಗುಲವಾಗಿತ್ತು. ಹೀಗಾಗಿ ಸನಾತನ ಧರ್ಮ ಪಾಲಕರಿಗೆ ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.

‘ಕಟ್ಟಡ ಜಾಮಾ ಮಸೀದಿ ಅಲ್ಲ, ನೀಲಕಂಠ ಮಹದೇವ ಮಹರಾಜ್ ಅವರ ಇಶಾನ್‌ ಮಂದಿರ’ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ ಈ ಪ್ರದೇಶದಲ್ಲಿ ಸಮೀಕ್ಷೆ ನಡೆಸಲು ಆಯೋಗವೊಂದನ್ನು ರಚಿಸುವಂತೆ ಕೋರಿ ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ.

ಪ್ರಕರಣ ವಿಚಾರಣೆ ನಡೆಸಿದ ಸಿವಿಲ್‌ ನ್ಯಾಯಾಧೀಶ (ಹಿರಿಯ ವಿಭಾಗ) ವಿಜಯ್‌ ಗುಪ್ತಾ ಅವರು, ಸೆಪ್ಟೆಂಬರ್‌ 15ರ ಮುಂದಿನ ವಿಚಾರಣೆ ವೇಳೆ ತಮ್ಮ ಪರ ವಾದ ಮಂಡನೆಗೆ ಹಾಜರಿರುವಂತೆ ಜಾಮಾ ಮಸೀದಿ ಶಂಸಿಯ ನಿರ್ವಹಣಾ ಸಮಿತಿ ಇಂತೆಜಾಮಿಯಾಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT