ಶನಿವಾರ, ಸೆಪ್ಟೆಂಬರ್ 26, 2020
26 °C

ಅಂಡಮಾನ್‌ ಮತ್ತು ನಿಕೋಬಾರ್‌: ’ವೇಗದ ಇಂಟರ್‌ನೆಟ್‌ ಸೇವೆ’ ಉದ್ಘಾಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪರಾಷ್ಟ್ರದ ಬಹುಭಾಗಕ್ಕೆ ವೇಗದ ಇಂಟರ್ನೆಟ್‌ (ಹೈಸ್ಪೀಡ್‌ ಇಂಟರ್‌ನೆಟ್‌) ಸೌಲಭ್ಯ ಕಲ್ಪಿಸಲು ನೆರವಾಗುವಂತಹ ’ಆಪ್ಟಿಕಲ್ ಫೈಬರ್ ಕೇಬಲ್‌’ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಉದ್ಘಾಟಿಸಿದರು.

ಇದು ದೇಶದ ಪ್ರಮುಖ ಭೂಭಾಗದಲ್ಲಿನ ನಗರಗಳಲ್ಲಿ ದೊರೆಯುವಂತಹ ವೇಗದ ಇಂಟರ್‌ನೆಟ್‌ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ದ್ವೀಪರಾಷ್ಟ್ರದ ಬಹುಭಾಗಕ್ಕೆ ಒದಗಿಸುವ ಯೋಜನೆಯಾಗಿದೆ.

ಚೆನ್ನೈ– ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳಿಗೆ (ಸಿಎಎನ್‌ಐ) ಸಾಗರದ ಒಳಗೆ (ಜಲಾಂತರ್ಗಾಮಿ) 2312 ಕಿ.ಮೀ ದೂರದವರೆಗೆ ಆಪ್‌ಟಿಕಲ್‌ ಫೈಬರ್ ಕೇಬಲ್‌ ಮೂಲಕ ಸಂಪರ್ಕ ಕಲ್ಪಿಸುವ ಈ ಇಂಟರ್‌ನೆಟ್‌ ಯೋಜನೆಗೆ ಡಿ.30,2018ರಂದು ಪ್ರಧಾನಿಯವರು ಅಡಿಗಲ್ಲು ಹಾಕಿದ್ದರು. 

ವಿಡಿಯೊ ಲಿಂಕ್‌ ಮೂಲಕ ಯೋಜನೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ’ಚೆನ್ನೈನಿಂದ ಪೋರ್ಟ್‌ ಬ್ಲೇರ್‌, ಪೋರ್ಟ್‌ಬ್ಲೇರ್‌ನಿಂದ ಲಿಟಲ್ ಅಂಡಮಾನ್‌ ಮತ್ತು ನಿಕೊಬಾರ್‌ ಮತ್ತು ಪೋರ್ಟ್‌ ಬ್ಲೇರ್‌ನಿಂದ ಸ್ವರಾಜ್‌ ದೀಪದವರೆಗೆ, ಒಟ್ಟು ದ್ವೀಪರಾಷ್ಟ್ರದ ಬಹು ಭಾಗದಲ್ಲಿ ಇಂದಿನಿಂದ ಈ ಯೋಜನೆಯ ಸೇವೆ ಲಭ್ಯವಾಗಲಿದೆ’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು