ಬುಧವಾರ, ಮಾರ್ಚ್ 29, 2023
27 °C

ನರೇಂದ್ರ ಮೋದಿಗೆ ಬ್ರಿಟನ್ ಪ್ರಧಾನಿ ಬೋರಿಸ್‌ ಕರೆ; ದ್ವಿಪಕ್ಷೀಯ ಮಾತುಕತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಬ್ರಿಟಿಷ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ, ಭಾರತ–ಬ್ರಿಟನ್‌ ವಾಣಿಜ್ಯ ಚಟುವಟಿಕೆಯೂ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಿದರು.

ರಕ್ಷಣಾ ಕ್ಷೇತ್ರ, ಉಭಯ ದೇಶಗಳ ನಡುವಣ ಅಂತರರಾಷ್ಟ್ರೀಯ ವಾಯುಸಂಪರ್ಕ ಮುಕ್ತಗೊಳಿಸುವುದು, ತಾಪಮಾನ ಬದಲಾವಣೆ ಕುರಿತಂತೆ ಚರ್ಚೆ ನಡೆಯಿತು. ಗ್ಲಾಸ್ಗೋದಲ್ಲಿ ನಡೆಯಲಿರುವ ಸಿಒಪಿ 26 ಶೃಂಗಸಭೆ ಹಿನ್ನೆಲೆಯಲ್ಲಿ ಈ ಚರ್ಚೆ ಪ್ರಮುಖವಾದುದಾಗಿದೆ ಎಂದು ಡೌನಿಂಗ್‌ ಸ್ಟ್ರೀಟ್‌ ಮೂಲಗಳು ತಿಳಿಸಿವೆ.

ಭಾರತದ ಲಸಿಕೆ ಪ್ರಮಾಣೀಕರಣವನ್ನು ಬ್ರಿಟನ್‌ ಮಾನ್ಯ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಬಣ್ಣಿಸಲಾಗಿದ್ದು, ಉಭಯ ನಾಯಕರು ಈ ಅಂಶವನ್ನು ಉಲ್ಲೇಖಿಸಿದರು. ಕೋವಿಶೀಲ್ಡ್‌ ಲಸಿಕೆ ಪಡೆದಿದ್ದು, ಬ್ರಿಟನ್‌ಗೆ ಪ್ರಯಾಣಿಸುವ ಭಾರತೀಯರು ಈಗ ಕಡ್ಡಾಯವಾಗಿ 10 ದಿನದ ಕ್ವಾರಂಟೈನ್‌ಗೆ ಒಳಪಡುವ ಅಗತ್ಯವಿಲ್ಲ.

ಉಭಯ ಮುಖಂಡರು ಕೋವಿಡ್‌ ಪರಿಸ್ಥಿತಿಯನ್ನು ಪ್ರಮುಖವಾಗಿ ಅವಲೋಕಿಸಿದ್ದು, ಅಂತರರಾಷ್ಟ್ರೀಯ ಪ್ರಯಾಣಕ್ಕೆ ಬಹು ಎಚ್ಚರಿಕೆಯಿಂದ ಅವಕಾಶವನ್ನು ಕಲ್ಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು ಎಂದು ಡೌನಿಂಗ್‌ ಸ್ಟ್ರೀಟ್ ವಕ್ತಾರರು ತಿಳಿಸಿದ್ದು, ಉಭಯ ಮುಖಂಡರ ಸಂಭಾಷಣೆಯನ್ನು ಓದಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು