ನವದೆಹಲಿ: ವಿಯೆಟ್ನಾಂನ ನೂತನ ಪ್ರಧಾನಿ ಫಾಮ್ ಮಿನ್ಹ್ ಚಿನ್ಹ್ಅವರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಫಾಮ್ಅವರ ಸಮರ್ಥ ಮಾರ್ಗದರ್ಶನದಲ್ಲಿಭಾರತ, ವಿಯೆಟ್ನಾಂಸಂಬಂಧಬಲಗೊಳ್ಳಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೋದಿ, ಫಾಮ್ ಮಾತುಕತೆ ಸಂಬಂಧಪ್ರಧಾನಿ ಕಚೇರಿಯು ಹೇಳಿಕೆ ಬಿಡುಗಡೆ ಮಾಡಿದ್ದು,ದ್ವಿಪಕ್ಷೀಯ ಸಂಬಂಧ, ಸಹಕಾರದವಿವಿಧ ಕ್ಷೇತ್ರಗಳಲ್ಲಿ ತಾವು ಹೊಂದಿರುವ ದೃಷ್ಟಿಕೋನಗಳ ಬಗ್ಗೆಉಭಯ ನಾಯಕರು ಚರ್ಚಿಸಿದ್ದಾರೆ. ಈ ಇಬ್ಬರೂ 2022ನ್ನು ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ50ನೇ ವರ್ಷವೆಂದು ಗುರುತಿಸಿದ್ದಾರೆ. ಅಂತೆಯೇ, ಈ ಶುಭ ಮೈಲಿಗಲ್ಲನ್ನು ವಿವಿಧ ಸ್ಮರಣಾರ್ಥ ಚಟುವಟಿಕೆಗಳ ಮೂಲಕ ಸೂಕ್ತ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂ ಮಹಾಸಾಗರ ಪ್ರದೇಶಕ್ಕೆ ಸಂಬಂಧಿಸಿದ ನಿಯಮಗಳ ವಿಚಾರದಲ್ಲಿ ಎರಡೂ ದೇಶಗಳು ಸಮಾನ ದೃಷ್ಟಿಕೋನವನ್ನುಹೊಂದಿವೆ.ಭಾರತ-ವಿಯೆಟ್ನಾಂ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ಪ್ರಾದೇಶಿಕ ಸ್ಥಿರತೆ, ಸಮೃದ್ಧಿ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಮೋದಿ ಶ್ಲಾಘಿಸಿದ್ದಾರೆ.ಭಾರತ ಮತ್ತು ವಿಯೆಟ್ನಾಂ ಸದ್ಯವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಹ ಸದಸ್ಯರಾಷ್ಟ್ರಗಳಾಗಿವೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಮುಂದುವರಿದು,ಕೋವಿಡ್ ಎರಡನೇ ಅಲೆಸಂದರ್ಭದಲ್ಲಿಮೌಲ್ಯಯುತ ನೆರವು ನೀಡಿದ್ದಕ್ಕಾಗಿ ವಿಯೆಟ್ನಾಂ ಸರ್ಕಾರ ಮತ್ತು ಅಲ್ಲಿನ ಜನರಿಗೆ ಮೋದಿ ಧನ್ಯವಾದ ಹೇಳಿದ್ದಾರೆ. ಸಾಂಕ್ರಾಮಿಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪರಸ್ಪರರ ಪ್ರಯತ್ನಗಳನ್ನು ಬೆಂಬಲಿಸಬೇಕು ಮತ್ತು ಸಹಕಾರವನ್ನು ಮುಂದುವರಿಸಬೇಕೆಂದು ಉಭಯ ನಾಯಕರು ಒಪ್ಪಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇವೇಳೆ, ಭಾರತಕ್ಕೆ ಭೇಟಿ ನೀಡುವಂತೆ ವಿಯೆಟ್ನಾಂನ ಪ್ರಧಾನಿ ಫಾಮ್ ಅವರನ್ನು ಮೋದಿ ಆಹ್ವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.