ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸಂಸತ್‌ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

Last Updated 10 ಡಿಸೆಂಬರ್ 2020, 19:49 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಸೆಂಟ್ರಲ್ ವಿಸ್ತಾ ಪ್ರದೇಶದಲ್ಲಿ ನೂತನ ಸಂಸತ್ ಭವನದ ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶಿಲಾನ್ಯಾಸ ನೆರವೇರಿಸಿದರು. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದು ಒಂದು ಮೈಲಿಗಲ್ಲು ಎಂದು ಮೋದಿ ಹೇಳಿದರು.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ಕಟ್ಟಡದ ನಿರ್ಮಾಣದ ಗುತ್ತಿಗೆ ಪಡೆದಿರುವ ಟಾಟಾ ಪ್ರಾಜೆಕ್ಟ್ಸ್‌ನ ಮಾತೃಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಭಾಗಿಯಾಗಿದ್ದರು.

ಮೋದಿ ಅವರು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಯನ್ನೂ ನೆರವೇರಿಸಿದರು. ಶೃಂಗೇರಿ ಮಠದ ಪುರೋಹಿತರು ಭೂಮಿಪೂಜೆಗೆ ಸಂಬಂಧಿಸಿದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ಗುಜರಾತ್‌ನ ಎಚ್‌ಸಿಪಿ ಡಿಸೈನ್ಸ್ ವಿನ್ಯಾಸ ಮಾಡಿರುವ ಈ ಕಟ್ಟಡದ ಕಾಮಗಾರಿಯನ್ನು 2022ರ ಆಗಸ್ಟ್ ಒಳಗೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 2022ರ ಆಗಸ್ಟ್ 15ಕ್ಕೆ 75 ವರ್ಷ ಪೂರ್ಣವಾಗುತ್ತದೆ. ಅಷ್ಟರಲ್ಲಿ ನೂತನ ಸಂಸತ್ ಭವನವು ನಿರ್ಮಾಣವಾಗಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ.

900 ರಿಂದ 1200 ಸಂಸತ್ ಸದಸ್ಯರು ಕುಳಿತುಕೊಳ್ಳುವಂತಹ ಸಾಮರ್ಥ್ಯವಿರುವ ಈ ಭವನದ ಒಟ್ಟು ವಿಸ್ತೀರ್ಣ 64,500 ಚದರ ಮೀಟರ್‌. ₹971 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಸಂಸತ್‌ ಭವನದ ನಿರ್ಮಾಣ ಕಾರ್ಯ 2022ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ ಈ ಭವನ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದೆ.

ದೇಶದ ‍ಪ್ರಜಾಪ್ರಭುತ್ವ ವ್ಯವಸ್ಥೆಯ ಪರಂಪರೆಯನ್ನು ಸಾರುವ ‘ಸಂವಿಧಾನ ಸಭಾಂಗಣ’, ಸಂಸದರಿಗಾಗಿ ವಿಶ್ರಾಂತಿ ಕೋಣೆ, ಗ್ರಂಥಾಲಯ, ವಿವಿಧ ಸಮಿತಿಗಳು ಸಭೆ ನಡೆಸಲು ಕೊಠಡಿಗಳು, ಭೋಜನಶಾಲೆ ಹಾಗೂ ವಿಶಾಲ ಪಾರ್ಕಿಂಗ್‌ ಸ್ಥಳವನ್ನು ಈ ನೂತನ ಕಟ್ಟಡ ಹೊಂದಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT