ಭಾನುವಾರ, ಜನವರಿ 17, 2021
22 °C
ವಿವೇಕಾನಂದರ ವಿಚಾರಗಳುಳ್ಳ ನಮೋ ಆ್ಯಪ್ ಲಿಂಕ್ ಹಂಚಿಕೊಂಡ ಮೋದಿ

ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ, ಈ ಬಾರಿ ‘ನಮೋ ಆ್ಯಪ್‌‘ನಲ್ಲಿ ವಿವೇಕಾನಂದರ ಆಲೋಚನೆಗಳು, ತತ್ವ ಸಿದ್ಧಾಂತಗಳನ್ನು ಹಂಚಿಕೊಳ್ಳುತ್ತಿದ್ದೇವೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‌ಸ್ವಾವಿ ವಿವೇಕಾನಂದ ಜಯಂತಿ ಅಂಗವಾಗಿ, ಅವರಿಗೆ ಗೌರವ ಸಲ್ಲಿಸಿ ಟ್ವೀಟ್‌ ಮಾಡಿರುವ ಪ್ರಧಾನಿ ಅವರು, ವಿವೇಕಾನಂದರ ಚಿಂತನೆಗಳನ್ನು ಒಳಗೊಂಡಿರುವ ‘ನಮೊ ಆ್ಯಪ್‘ನ ಲಿಂಕ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಈ ವರ್ಷದ ವಿವೇಕಾನಂದರ ಜನ್ಮದಿನದ ನೆನಪಿನಲ್ಲಿ ನಮೋ ಆ್ಯಪ್ ಮೂಲಕ ಅವರ ಕ್ರಿಯಾತ್ಮಕ ಆಲೋಚನೆಗಳು ಮತ್ತು ಆದರ್ಶಗಳನ್ನು ವಿಶ್ವದಾದ್ಯಂತ ಹಂಚೋಣ‘ ಎಂದು ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಅತ್ಯುನ್ನತ ಆಧ್ಯಾತ್ಮಿಕ ತತ್ವಜ್ಞಾನಿ, ವಿವೇಕಾನಂದರು 1863 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದರು. ಅವರು ವೇದಾಂತ ವಿಚಾರಗಳನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ವಿವೇಕಾನಂದರು ತಮ್ಮ ವಿಚಾರಗಳ ಮೂಲಕ ನನ್ನ ಮೇಲೆ ತೀವ್ರ ಪರಿಣಾಮ ಬೀರಿದ್ದಾರೆ ಎಂದು ಮೋದಿಯವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಮೋದಿ ಅವರು ಇತ್ತೀಚೆಗೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನು ಅನಾವರಣಗೊಳಿಸಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು