ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊವಿಡ್ ವಿರುದ್ಧದ ಭಾರತದ ಹೋರಾಟ ಜಗತ್ತಿಗೇ ಸ್ಫೂರ್ತಿದಾಯಕ: ನರೇಂದ್ರ ಮೋದಿ

Last Updated 16 ಫೆಬ್ರುವರಿ 2021, 14:18 IST
ಅಕ್ಷರ ಗಾತ್ರ

ಹೈದರಾಬಾದ್:ಕೋವಿಡ್–19 ಸಾಂಕ್ರಾಮಿಕದ ವಿರುದ್ಧ ಭಾರತದ ಹೋರಾಟವು ಜಗತ್ತಿಗೇ ಸ್ಫೂರ್ತಿದಾಯಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಶ್ರೀ ರಾಮಚಂದ್ರ ಮಿಷನ್’ನ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ‘ಆರೋಗ್ಯಕರ ಸಮತೋಲನದಿಂದ ಕೂಡಿದ ಕಲ್ಯಾಣದ ಮೂಲಕ ಜಗತ್ತಿಗೆ ಒಳಿತುಮಾಡಲು ಭಾರತವು ಮಾನವ ಕೇಂದ್ರಿತ ವಿಧಾನವನ್ನು ಅನುಸರಿಸುತ್ತಿದೆ’ ಎಂದು ಹೇಳಿದ್ದಾರೆ.

‘ಸಾಂಕ್ರಾಮಿಕದ ಆರಂಭದಲ್ಲಿ ಇಡೀ ಜಗತ್ತು ಭಾರತದ ಪರಿಸ್ಥಿತಿಯ ಬಗ್ಗೆ ಚಿಂತೆ ಮಾಡಿತ್ತು. ಆದರೆ, ಇಂದು ಭಾರತದ ಹೋರಾಟವು ಇಡೀ ಜಗತ್ತಿಗೆ ಪ್ರೇರಣಾದಾಯಕವಾಗಿದೆ’ ಎಂದು ಮೋದಿ ಹೇಳಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಭಾರತ ಕೈಗೆತ್ತಿಕೊಂಡಿದೆ. ಬಡಿವರಿಗೂ ಘನತೆಯಿಂದ ಕೂಡಿದ ಜೀವನ ನಡೆಸಲು ಅವಕಾಶ ನೀಡುವ ಉದ್ದೇಶದೊಂದಿಗೆ ಈ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT