ನವದೆಹಲಿ: ಲಖನೌದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆಯಲಿರುವ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ಪೊಲೀಸ್ ಮಹಾ ನಿರೀಕ್ಷಕರ (ಐಜಿಪಿ) 56ನೇ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ನವೆಂಬರ್ 20 ರಿಂದ ಆರಂಭವಾಗುವ ಎರಡು ದಿನಗಳ ಸಮ್ಮೇಳನದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುತ್ತಾರೆ.

ಅಲ್ಲದೆ ಇತರ ಆಹ್ವಾನಿತರು 37 ವಿವಿಧ ಸ್ಥಳಗಳಿಂದ ವಿಡಿಯೊ ಕಾನ್ಪರೆನ್ಸ್ ಮೂಲಕ ಭಾಗವಹಿಸಲಿದ್ದಾರೆ.

ಸೈಬರ್ ಅಪರಾಧ, ದತ್ತಾಂಶ ನಿರ್ವಹಣೆ, ಭಯೋತ್ಪಾದನೆ ನಿಗ್ರಹದ ಸವಾಲುಗಳು, ಎಡಪಂಥೀಯ ಭಯೋತ್ಪಾದಕತೆ, ಮಾದಕವಸ್ತು ಕಳ್ಳಸಾಗಣೆ ತಡೆ, ಜೈಲು ಸುಧಾರಣೆಗಳು ಸೇರಿ ಇತರ ಅಂಶಗಳನ್ನು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.

2014 ರಿಂದೀಚೆಗೆ ಪ್ರಧಾನಿ ಮೋದಿ ಅವರು ಡಿಜಿಪಿಗಳ ಸಮ್ಮೇಳನದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಸವಾಲೆಸೆಯುವ ವಿಷಯಗಳ ಮುಕ್ತ ಚರ್ಚೆಗೆ ಇವು ಅವಕಾಶ ಒದಗಿಸುತ್ತವೆ.2014ರಿಂದ ಪ್ರತಿವರ್ಷ ನಡೆಯುತ್ತಿರುವ ಈ ಸಮ್ಮೇಳನವು 2020ರಲ್ಲಿ ಕೋವಿಡ್ ಹಿನ್ನೆಲೆ ವರ್ಚುವಲ್ ಮಾದರಿಯಲ್ಲಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.