ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ಗತಿಶಕ್ತಿ ಯೋಜನೆಗೆ ನಾಳೆ ಮೋದಿ ಚಾಲನೆ

Last Updated 12 ಅಕ್ಟೋಬರ್ 2021, 16:50 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ಏಜೆನ್ಸಿಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಲಿದ್ದಾರೆ.

ಗತಿಶಕ್ತಿ ಯೋಜನೆಯು ಮೂಲಸೌಕರ್ಯ ಕ್ಷೇತ್ರದ ಐತಿಹಾಸಿಕ ಘಟನೆಯಾಗಲಿದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ತಿಳಿಸಿದೆ.

ಇಲಾಖೆಗಳು ಪರಸ್ಪರ ಯೋಜನೆಗಳ ಬಗ್ಗೆ ಕೇಂದ್ರೀಕೃತ ಪೋರ್ಟಲ್‌ ಮೂಲಕ ತಿಳಿಯಬಹುದಾಗಿದೆ ಮತ್ತು ಬಹು-ಮಾದರಿ ಸಂಪರ್ಕ ವ್ಯವಸ್ಥೆಯು, ಜನರು, ಸರಕು ಮತ್ತು ಸೇವೆಗಳ ಸಮಗ್ರ ಮತ್ತು ತಡೆರಹಿತ ಸಂಚಾರಕ್ಕೆ ಅವಕಾಶ ನೀಡಲಿದೆ.

ಈ ಯೋಜನೆಯು ಸಮಗ್ರತೆ, ಆದ್ಯತೆ, ಆಶಾವಾದ, ಒಟ್ಟುಗೂಡುವಿಕೆ, ವಿಶ್ಲೇಷಣಾತ್ಮಕತೆ ಮತ್ತು ಕ್ರಿಯಾತ್ಮಕತೆ ಎಂಬ ಆರು ವಿಚಾರಗಳನ್ನು ಆಧರಿಸಿದೆ.

ಯೋಜನೆಯಿಂದ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು,ಪೂರೈಕೆಯ ಸರಪಳಿಸುಧಾರಣೆಯಾಗಲಿದೆ. ಇದರಿಂದ ಸ್ಥಳೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬಹುದಾಗಿದೆಎಂದೂಪಿಎಂಒ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT