ಏಕತಾ ಪ್ರತಿಮೆಗೆ ರೈಲ್ವೆ ಸಂಪರ್ಕ: ಎಂಟು ರೈಲಿಗೆ ಇಂದು ಮೋದಿ ಚಾಲನೆ

ನವದೆಹಲಿ: ದೇಶದ ವಿವಿಧ ಭಾಗಗಳಿಂದ ಏಕತಾ ಪ್ರತಿಮೆ ಇರುವ ಗುಜರಾತ್ನ ಕೆವಡಿಯಾಗೆ ಸಂಚರಿಸುವ ಎಂಟು ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಚಾಲನೆ ನೀಡಲಿದ್ದಾರೆ.
ಕೆವಡಿಯಾ ರೈಲು ನಿಲ್ದಾಣವು ಹಸಿರು ಕಟ್ಟಡ ಪ್ರಮಾಣ ಪತ್ರ ಪಡೆದ ದೇಶದ ಮೊದಲ ರೈಲು ನಿಲ್ದಾಣವಾಗಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಿಸಿರುವ ಈ ಪ್ರತಿಮೆಯನ್ನು ನೋಡಲು ಇದೀಗ ದೇಶದ ವಿವಿಧ ಭಾಗಗಳಿಂದ ರೈಲ್ವೆ ಸಂಪರ್ಕ ದೊರೆಯಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಈ ಪೈಕಿ ಒಂದು ರೈಲು ಜನ ಶತಾಬ್ಧಿ ಎಕ್ಸ್ಪ್ರೆಸ್ ಆಗಿದ್ದು, ಇದು ಅಹಮದಾಬಾದ್ನಿಂದ ಕೆವಡಿಯಾಗೆ ಸಂಚರಿಸದೆ. ಈ ರೈಲಿನಲ್ಲಿ ಅತ್ಯಾಧುನಿಕ ವಿಸ್ಟಾಡೋಮ್ ಬೋಗಿಗಳು ಇರಲಿವೆ ಎಂದು ಹೇಳಿರುವ ಅವರು, ಕೆಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.