ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕತೆಯ ರಾಜಕಾರಣ ಒಳ್ಳೆಯದಲ್ಲ: ಒಟ್ಟಾಗಿರಲು ಸಿಎಂ ಮಮತಾ ಬ್ಯಾನರ್ಜಿ ಕರೆ

ಅಕ್ಷರ ಗಾತ್ರ

ಕೋಲ್ಕತ್ತ: ದೇಶದಲ್ಲಿ ನಡೆಯುತ್ತಿರುವ ‘ಪ್ರತ್ಯೇಕತೆಯ ರಾಜಕೀಯ’ ಸ್ವಾಗತಾರ್ಹವಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಗರದ ರೆಡ್ ರೋಡ್‌ನಲ್ಲಿ ಈದ್ ಉಲ್ ಫಿತ್ರ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಅವರು, ಮುಸ್ಲಿಮರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

‘ದೇಶದಲ್ಲಿ ಸದ್ಯದ ಪರಿಸ್ಥಿತಿ ಚೆನ್ನಾಗಿಲ್ಲ, ಒಡೆದು ಆಳುವ ನೀತಿ ದೇಶದಾದ್ಯಂತ ವ್ಯಾಪಿಸಿದೆ. ಇದಕ್ಕೆ ಭಯಪಡಬಾರದು, ಉತ್ತಮ ಭವಿಷ್ಯಕ್ಕಾಗಿ ಒಂದಾಗಿ ಹೋರಾಟ ಮುಂದುವರಿಸಬೇಕಿದೆ’ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರ ನಿಮಗೆ (ಮುಸ್ಲಿಮರಿಗೆ) ದುಃಖವನ್ನುಂಟುಮಾಡುವ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಮಮತಾ ಭರವಸೆ ನೀಡಿದ್ದಾರೆ. ಪ್ರಾರ್ಥನೆಯಲ್ಲಿ 14,000 ಮಂದಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT