ಬುಧವಾರ, ಡಿಸೆಂಬರ್ 7, 2022
22 °C

ವಿಡಿಯೊ: 93 ಮತದಾರರಿಗಾಗಿ ಹಿಮಚ್ಛಾದಿತ ಪರ್ವತದಲ್ಲಿ ನಡೆದು ಸಾಗಿದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಬಾ: ಶನಿವಾರ ನಡೆದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಸಂದರ್ಭ ಚಂಬಾ ಜಿಲ್ಲೆಯ ಭರ್ಮೌರ್ ವಿಧಾನಸಭಾ ಕ್ಷೇತ್ರದ ಚಸಕ್ ಭಟೋರಿ ಮತಗಟ್ಟೆಗೆ ತೆರಳಲು ಚುನಾವಣಾ ಸಿಬ್ಬಂದಿ ಹಿಮಚ್ಛಾದಿತ ಪರ್ವತದ ಮೇಲೆ ನಡೆದು ಹೋಗುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕರ್ಷಣೆಗೆ ಕಾರಣವಾಗಿದೆ.

ಈ ವಿಡಿಯೊದಲ್ಲಿ ಚುನಾವಣಾ ಸಿಬ್ಬಂದಿ ಮತಕೇಂದ್ರ ತಲುಪಲು ಹಿಮದ ಮೇಲೆ 6 ಗಂಟೆಗಳ ಕಾಲ 15 ಕಿ.ಮೀ ಕ್ರಮಿಸಿರುವ ದೃಶ್ಯವಿದೆ.

ಈ ಮತಕೇಂದ್ರದಲ್ಲಿ 93 ಮಂದಿ ಮತದಾರರಿದ್ದು, ದಪ್ಪನಾದ ಉಡುಪುಗಳನ್ನು ಧರಿಸಿದ್ದ ಸಿಬ್ಬಂದಿ ಹಿಮಪಾತದ ನಡುವೆ ನಡೆದು ಸಾಗಿದ್ದಾರೆ. ಇಲ್ಲಿ ಶೇಕಡ 75.26ರಷ್ಟು ಮತದಾನವಾಗಿದೆ.

ಒಟ್ಟಾರೆ, ಹಿಮಾಚಲಪ್ರದೇಶದಲ್ಲಿ ಶೇಕಡ 66ರಷ್ಟು ಮತದಾನವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು