ಮಂಗಳವಾರ, ನವೆಂಬರ್ 24, 2020
22 °C

ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಅಶ್ಲೀಲ ಸಂದೇಶ ಕಳುಹಿಸಿದ ಗೋವಾ ಡಿಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ: ಸಾಮಾಜಿಕ ಹೋರಾಟಗಾರರು ರಚಿಸಿದ್ದ ‘ವಿಲೇಜಸ್‌ ಆಫ್‌ ಗೋವಾ’ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಅಶ್ಲೀಲ ವಿಷಯವಿದ್ದ ಸಂದೇಶವೊಂದನ್ನು ಗೋವಾ ಉಪಮುಖ್ಯಮಂತ್ರಿ(ಡಿಸಿಎಂ) ಚಂದ್ರಕಾಂತ್‌ ಕವಳೇಕರ್ ಅವರು ಕಳುಹಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. 

ಘಟನೆ ನಡೆದ ಬೆನ್ನಲ್ಲೇ ಗೋವಾ ಪೊಲೀಸ್‌ ಸೈಬರ್‌ ಸೆಲ್‌ನಲ್ಲಿ ದೂರು ದಾಖಲಿಸಿರುವ ಕವಳೇಕರ್‌ ತಮ್ಮ ಮೊಬೈಲ್‌ ಹ್ಯಾಕ್‌ ಆಗಿರುವುದಾಗಿ ತಿಳಿಸಿದ್ದಾರೆ. ‘ಸೋಮವಾರ ತಡರಾತ್ರಿ 1.20ರ ವೇಳೆಗೆ ಸಂದೇಶ ಕಳುಹಿಸಲಾಗಿದ್ದು, ಆ ಸಂದರ್ಭದಲ್ಲಿ ನಾನು ಮಲಗಿದ್ದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಚಂದ್ರಕಾಂತ್‌ ಕವಳೇಕರ್‌

‘ವಾಟ್ಸ್‌ಆ್ಯಪ್‌ನಲ್ಲಿ ಹಲವು ಗ್ರೂಪ್‌ಗಳನ್ನು ನಾನು ಸದಸ್ಯನಾಗಿದ್ದೇನೆ. ಆದರೆ ಈ ಗ್ರೂಪ್‌ಗಷ್ಟೇ ಅಶ್ಲೀಲ ಸಂದೇಶ ಕಳುಹಿಸಲಾಗಿದೆ. ಸಂದೇಶ ಕಳುಹಿಸಿದ ಸಂದರ್ಭದಲ್ಲಿ ನಾನು ಮೊಬೈಲ್‌ ಬಳಿಯೇ ಇರಲಿಲ್ಲ. ನಾನು ಮಲಗಿದ್ದೆ. ಕ್ರಿಮಿನಲ್‌ ಉದ್ದೇಶದಿಂದ ಪಿತೂರಿ ಮಾಡಿ ಈ ಕೃತ್ಯ ನಡೆಸಲಾಗಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಉಲ್ಲೇಖಿಸಿದ್ದಾರೆ.

ಉಪಮುಖ್ಯಮಂತ್ರಿಗಳ ನಡತೆಯ ಕುರಿತು ತನಿಖೆ ನಡೆಸಬೇಕು ಎಂದು ವಿಪಕ್ಷವಾದ ಗೋವಾ ಫಾರ್ವರ್ಡ್‌ ಆಗ್ರಹಿಸಿದೆ. ಪ್ರಾಥಮಿಕ ತನಿಖೆಯನ್ನು ಆರಂಭಿಸಲಾಗಿದ್ದು, ಇದಾದ ನಂತರದಲ್ಲಿ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಸೈಬರ್‌ ಸೆಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು