ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಜ್ವರ: 1.60 ಲಕ್ಷಕ್ಕೂ ಅಧಿಕ ಪೌಲ್ಟ್ರಿ ಹಕ್ಕಿಗಳ ನಾಶ

Last Updated 8 ಜನವರಿ 2021, 17:37 IST
ಅಕ್ಷರ ಗಾತ್ರ

ಚಂಡೀಗಡ: ಕೆಲ ಪೌಲ್ಟ್ರಿಗಳ ಮಾದರಿಯಲ್ಲಿ ಹಕ್ಕಿಜ್ವರ ದೃಢಪಟ್ಟಿರುವ ಕಾರಣದಿಂದಾಗಿ, ಹರಿಯಾಣದ ಪಂಚ್‌ಕುಲ ಜಿಲ್ಲೆಯಲ್ಲಿರುವ ಐದು ಪೌಲ್ಟ್ರಿ ಫಾರ್ಮ್‌ನಲ್ಲಿರುವ 1.60ಲಕ್ಷ ಕೋಳಿ, ಬಾತುಕೋಳಿ ಮುಂತಾದ ಹಕ್ಕಿಗಳನ್ನು ಕೊಂದುಹಾಕಲಾಗುವುದು ಎಂದು ಕೃಷಿ ಸಚಿವ ಜೆ.ಪಿ.ದಲಾಲ್‌ ಶುಕ್ರವಾರ ತಿಳಿಸಿದರು.

‘ಜಿಲ್ಲೆಯ ರಾಯ್ಪುರ್‌ ರಾಣಿ ಬ್ಲಾಕ್‌ನ ಸಿದ್ಧಾರ್ಥ್‌ ಪೌಲ್ಟ್ರಿ ಫಾರ್ಮ್‌ನ ಐದು ಮಾದರಿಗಳಲ್ಲಿ ಎಚ್‌5ಎನ್‌8 ದೃಢಪಟ್ಟಿದೆ. ಇದೊಂದು ಸಾಂಕ್ರಾಮಿಕವಾದ ವೈರಾಣುವಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ಸೋಂಕು ಇರುವ ಕೋಳಿ ಅಥವಾ ಇನ್ನಿತರೆ ಹಕ್ಕಿಗಳು ಪತ್ತೆಯಾದ ಫಾರ್ಮ್‌ನ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಇತರೆ ಪೌಲ್ಟ್ರಿ ಫಾರ್ಮ್‌ನ ಎಲ್ಲ ಹಕ್ಕಿಗಳನ್ನೂ ನಾಶಪಡಿಸಬೇಕು. ಈ ಫಾರ್ಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನೂ ಆರೋಗ್ಯ ಇಲಾಖೆಯು ತಪಾಸಣೆಗೆ ಒಳಪಡಿಸಿದೆ. ಇವರಿಗೆ ಲಸಿಕೆಯನ್ನೂ ನೀಡಲಾಗುವುದು’ ಎಂದು ದಲಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT