ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ ವಿಶೇಷ: ಕೊಯಮತ್ತೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನಾಳೆ

Last Updated 17 ಫೆಬ್ರುವರಿ 2023, 11:43 IST
ಅಕ್ಷರ ಗಾತ್ರ

ಬೆಂಗಳೂರು: ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಫೆಬ್ರುವರಿ 18ರಂದು ನಡೆಯಲಿರುವ ಮಹಾಶಿವರಾತ್ರಿ ಸಂಭ್ರಮಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗಿಯಾಗಲಿದ್ದು, ರಾಷ್ಟ್ರಪತಿಯಾದ ನಂತರ ತಮಿಳುನಾಡಿಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

ನಾಳೆ (ಶನಿವಾರ) ಸಂಜೆ 6 ಗಂಟೆಗೆ ಸದ್ಗರು ಜಗ್ಗಿ ವಾಸುದೇವ್ ನೇತೃತ್ವದ ಕಾರ್ಯಕ್ರಮದಲ್ಲಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ. ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಯೋಗ ಕೇಂದ್ರ ಸುತ್ತಮುತ್ತ ವಿಶೇಷ ಭದ್ರತೆ ಕಲ್ಪಿಸಲಾಗಿದೆ ಎಂದು ಇಶಾ ಫೌಂಡೇಶನ್ ಮಾಹಿತಿ ನೀಡಿದೆ.

ದೇಶದ ಹೆಸರಾಂತ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ರಾಜಸ್ಥಾನದ ಜಾನಪದ ಗಾಯಕ ಮಾಮಿ ಖಾನ್, ಪ್ರಶಸ್ತಿ ವಿಜೇತ ನಿಲ್ರಾದಿ ಕುಮಾರ್, ಗಾಯಕ ರಾಮ್ ಮಿರಿಯಾಲ, ಹಿನ್ನೆಲೆ ಗಾಯಕ ವೆಲ್ ಮುರುಗನ್, ಮಂಗ್ಲಿ, ಕುಟ್ಲೆ ಖಾನ್, ಮತ್ತು ಬೆಂಗಾಲಿ ಜಾನಪದ ಗಾಯಕಿ ಅನನ್ಯ ಚಕ್ರಬೋರ್ಟಿ ಸೇರಿದಂತೆ ಕರ್ನಾಟಕ ಥೇಯಂ ಜಾನಪದ ಕಲಾತಂಡದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಶಿವರಾತ್ರಿ ಕಾರ್ಯಕ್ರಮವು ಆನ್‌ಲೈನ್‌ನಲ್ಲಿ 16 ಭಾಷೆಗಳಲ್ಲಿ ನೇರಪ್ರಸಾರಗೊಳ್ಳಲಿದ್ದು, ಇಂಗ್ಲೀಷ್, ಹಿಂದಿ, ತೆಲುಗು, ಕನ್ನಡ, ಮರಾಠಿ ಮತ್ತು ಸ್ಥಳೀಯ ಭಾಷೆಗಳನ್ನು ಒಳಗೊಂಡಂತೆ ಭಾರತದ ಪ್ರಮುಖ ಟಿವಿ ನೆಟ್ ವರ್ಕ್‌ಗಳಲ್ಲಿ ಪ್ರಸಾರಗೊಳ್ಳಲಿದೆ ಎಂದು ಇಶಾ ಫೌಂಡೇಶನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT