ಸೋಮವಾರ, ಮಾರ್ಚ್ 20, 2023
24 °C
ಪುಸ್ತಕದಲ್ಲಿ ಏನಿದೆ ಎನ್ನುವುದರ ಬಗ್ಗೆ ಬ್ರಿಟನ್‌ ರಾಜಮನೆತನಕ್ಕೆ ಆತಂಕ

ಪ್ರಿನ್ಸ್‌ ಹ್ಯಾರಿ ಅವರ ಬಹುನಿರೀಕ್ಷಿತ ಆತ್ಮ ಚರಿತ್ರೆ ‘ಸ್ಪೇರ್‌‘ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಲಂಡನ್‌: ಬ್ರಿಟನ್‌ ರಾಜಕುಮಾರ ಪ್ರಿನ್ಸ್ ಹ್ಯಾರಿ ಅವರ ಅತ್ಮಕತೆ ‘ಸ್ಪೇರ್‌‘ ಮಂಗಳವಾರ ಯುಕೆಯಾದ್ಯಂತ ಬಿಡುಗಡೆಯಾಗಿದೆ. ಬಿಡುಗಡೆಯಾಗುವುದಕ್ಕೂ ಮುನ್ನ ಪುಸ್ತಕದ ಹಲವು ವಿಷಯಗಳು ಬಹಿರಂಗಗೊಂಡಿದ್ದು, ಭಾರಿ ಚರ್ಚೆಗೆ ಕಾರಣವಾಗಿತ್ತು.

ಸೋಮವಾರ ಮಧ್ಯರಾತ್ರಿಯಿಂದಲೇ ಪುಸ್ತಕ ಮಾರಾಟ ಆರಂಭವಾಗಿದ್ದು, ಹಲವು ಮಳಿಗೆಗಳಲ್ಲಿ ಶೇ 50 ರಷ್ಟು ರಿಯಾಯತಿ ಕೂಡ ನೀಡಲಾಗಿದೆ. 

ಬ್ರಿಟನ್‌ನ ಹಾಲಿ ರಾಜ ಮೂರನೇ ಚಾರ್ಲ್ಸ್‌ (ಹ್ಯಾರಿ ಅವರ ತಂದೆ) ಹಾಗೂ ಪ್ರಿನ್ಸನ್ ಡಯಾನಾ (ಹ್ಯಾರಿ ಅವರ ತಾಯಿ) ಕುರಿತು ಪುಸ್ತಕದಲ್ಲಿ ಇರುವ ಹಲವು ಮಾಹಿತಿಗಳು ಸೋರಿಕೆಯಾಗಿದ್ದು, ಈ ಪುಸ್ತಕದಿಂದ ಬ್ರಿಟನ್‌ ರಾಜಮನೆತನೆಗಕ್ಕೆ ಮುಜುಗರ ಉಂಟಾಗುವ ಸಾಧ್ಯತೆ ಇದೆ.

ಈ ಪುಸ್ತಕದ 16 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಆಡಿಯೋ ಬುಕ್‌ ಕೂಡ ಲಭ್ಯವಿದೆ.

ಬ್ರಿಟನ್‌ ರಾಜನಿಗೆ ಆತಂಕ

ಈ ಪುಸ್ತಕದ ಪುಟದಲ್ಲಿ ಏನೇನಿದೆ ಎನ್ನುವುದರ ಕುರಿತು ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್ ಅವರಿಗೆ ಆತಂಕ ತಂದೊಡ್ಡಿದೆ. ಈಗಾಗಲೇ ಬಹಿರಂಗಗೊಂಡಿರುವ ಪುಸ್ತಕದ ಹಲವು ಪುಟಗಳಲ್ಲಿ ಚಾರ್ಲ್ಸ್ ಅವರ ಬಗ್ಗೆ ಉಲ್ಲೇಖ ಇದ್ದು, ಇನ್ನು ಏನೇನಿದೆ ಎನ್ನುವುದು ಅವರಿಗೆ ಕಳವಳ ತರಿಸಿದೆ ಎನ್ನಲಾಗಿದೆ.

ಡಯಾನ ಸಾವಿನ ಬಳಿಕ ಕ್ಯಾಮಿಲಾ ಅವರ ಜತೆ ಚಾರ್ಲ್ಸ್ ಅವರ ವಿವಾಹ, ವಿವಾಹಕ್ಕೂ ಮುನ್ನ ನಡೆದ ಮಾತುಕತೆ, ಅಣ್ಣ ವಿಲಿಯಂ ಜತೆಗಿನ ಸಂಘರ್ಷ, ಅಮ್ಮನ ನೆನಪು ಇವೆಲ್ಲವೂ ಹ್ಯಾರಿ ಅವರ ಪುಸ್ತಕದಲ್ಲಿ ಅಡಕವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು