ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ದೇಣಿಗೆ ನೀಡುವಂತೆ ಜಿ–7ರಾಷ್ಟ್ರಗಳಿಗೆ ಪ್ರಿಯಾಂಕಾ ಚೋಪ್ರಾ ಒತ್ತಾಯ

Last Updated 8 ಜೂನ್ 2021, 12:06 IST
ಅಕ್ಷರ ಗಾತ್ರ

ಮುಂಬೈ: ತುರ್ತಾಗಿ ಅಗತ್ಯವಿರುವ ರಾಷ್ಟ್ರಗಳಿಗೆ ತಮ್ಮಲ್ಲಿನ ಶೇಕಡ 20ರಷ್ಟು ಲಸಿಕೆಯನ್ನು ‘ಜಿ–7’ ರಾಷ್ಟ್ರಗಳು ದೇಣಿಗೆ ನೀಡಬೇಕು ಎಂದು ಪ್ರಿಯಾಂಕಾ ಚೋಪ್ರಾ, ಜೆಮ್ಮ ಚಾನ್‌, ಒಲಿವಿಯಾ ಕೊಲ್ಮನ್‌ ಸೇರಿದಂತೆ ಹಲವು ಚಲನಚಿತ್ರ ರಂಗದ ಹಲವು ನಟ, ನಟಿಯರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಯುನಿಸೆಫ್‌ಗೆ ಬರೆದಿರುವ ಬಹಿರಂಗ ಪತ್ರಕ್ಕೆ ಇವರು ಸಹಿ ಹಾಕಿದ್ದಾರೆ. ಜೂನ್‌ 11ರಿಂದ 13ರವರೆಗೆ ಬ್ರಿಟನ್‌ನಲ್ಲಿ ನಡೆಯಲಿರುವ ‘ಜಿ– 7’ ಶೃಂಗಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಬೇಕು. ಲಸಿಕೆ ಪೂರೈಕೆ ಬಗ್ಗೆ ಚರ್ಚಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಸಾಂಕ್ರಾಮಿಕ ಕಾಯಿಲೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ‘ಜಿ– 7’ ರಾಷ್ಟ್ರಗಳ ನಾಯಕರು ಸಭೆ ಸೇರಲಿದ್ದಾರೆ. ಈ ಸಭೆಯಲ್ಲಿ ಕೊರೊನಾ ವೈರಸ್‌ನಿಂದ ಜಾಗತಿಕವಾಗಿ ಯಾವ ರೀತಿಯಲ್ಲಿ ಪುನಶ್ಚೇತನಗೊಳ್ಳಬೇಕು ಎನ್ನುವ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT