ಶುಕ್ರವಾರ, ಅಕ್ಟೋಬರ್ 29, 2021
20 °C

ಶ್ರೀನಗರ: ಕಾಶ್ಮೀರಿ ಪಂಡಿತ ಉದ್ಯಮಿ ಉಗ್ರರ ಗುಂಡಿಗೆ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಇಲ್ಲಿನ ಇಕ್ಬಾಲ್‌ ಉದ್ಯಾನದಲ್ಲಿ ಕಾಶ್ಮೀರ ಪಂಡಿತ, ಶ್ರೀನಗರದ ಪ್ರಮುಖ ಔಷಧ ಅಂಗಡಿ ಮಾಲೀಕ ಮಖಾನ್‌ ಲಾಲ್‌ ಬಿಂದ್ರೂ ಮಂಗಳವಾರ ಶಂಕಿತ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಿಂದ್ರೂ (68) ತಮ್ಮ ಔಷಧ ಅಂಗಡಿಯಲ್ಲಿ ಔಷಧಿಗಳನ್ನು ವಿತರಿಸುತ್ತಿರುವಾಗ ಹಂತಕರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.  

ಗುಂಡೇಟಿನಿಂದ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದೂ ಅವರು ಹೇಳಿದರು.

1990ರಲ್ಲಿ ಭಯೋತ್ಪಾದಕ ಕೃತ್ಯಗಳು ಆರಂಭವಾದ ನಂತರ ಕಾಶ್ಮೀರದಿಂದ ವಲಸೆ ಹೋಗದೆ ಅಲ್ಲಿಯೇ ಉಳಿದಿದ್ದ ಕೆಲವೇ ಕಾಶ್ಮೀರ ಪಂಡಿತರಲ್ಲಿ ಬಿಂದ್ರೂ ಸಹ ಒಬ್ಬರು.  

ಬಿಂದ್ರೂ ಅವರು ತಮ್ಮ ಪತ್ನಿಯೊಂದಿಗೆ ತಮ್ಮ ಔಷಧಾಲಯ ಬಿಂದ್ರೂ ಮೆಡಿಕೇಟ್‌ ಅನ್ನು ಮುಂದುವರೆಸಲು ಅಲ್ಲಿಯೇ ಉಳಿದಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು