ಉಪಗ್ರಹ ‘ಸಿಎಂಎಸ್–01’ ಉಡಾವಣೆ 17ರಂದು

ಬೆಂಗಳೂರು: ಸಂಪರ್ಕ ಸೇವೆಗೆ ಬಳಸಲಾಗುವ ಉಪಗ್ರಹ ಸಿಎಂಎಸ್–01 ಅನ್ನು ಪೊಲಾರ್ ಉಪಗ್ರಹ ಉಡಾವಣಾ ವಾಹಕ (ಪಿಎಸ್ಎಲ್‌ವಿ–ಸಿ50) ಮೂಲಕ ಡಿಸೆಂಬರ್ 17ರಂದು ಉಡಾವಣೆ ಮಾಡಲಾಗುತ್ತದೆ.
ಶ್ರೀಹರಿಕೋಟಾದಲ್ಲಿ ಇರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆ ನಡೆಯಲಿದ್ದು, ಇದು ಪಿಎಸ್‌ಎಲ್‌ವಿ ಸರಣಿಯ 5ನೇ ಕಾರ್ಯಕ್ರಮವಾಗಿದೆ. ಹವಾಮಾನ ಪರಿಸ್ಥಿತಿಯನ್ನು ಆಧರಿಸಿ ಅಂದು ಮಧ್ಯಾಹ್ನ 3.41 ಗಂಟೆಗೆ ಉಡಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಇಸ್ರೊ ಸಂಸ್ಥೆಯ ತಿಳಿಸಿದೆ.
ಸಿಎಂಎಸ್ –01 ಸಂಪರ್ಕ ಸೇವೆಯ ಉಪಗ್ರಹವಾಗಿದ್ದು, ವಿಸ್ತರಿಸಲಾದ ಸಿ–ಬ್ಯಾಂಡ್ ತರಂಗಾಂತರದಲ್ಲಿ ಸೇವೆಯನ್ನು ಕಲ್ಪಿಸಲಿದೆ ಎಂದು ಹೇಳಿಕೆಯು ತಿಳಿಸಿದೆ. ಇದು, ಭಾರತದ 43ನೇ ಸಂವಹನ ಉಪಗ್ರಹವಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.