ನವದೆಹಲಿ: ಭಾರತದ ವಾಯಪಡೆಗೆ ಸೇರ್ಪಡೆಗೊಂಡಿರುವ ಅತ್ಯಾಧುನಿಕ ರಫೇಲ್ ಯುದ್ಧವಿಮಾನಗಳು ಬಾನಂಗಳದಲ್ಲಿ ವಿವಿಧ ಕಸರತ್ತು ಪ್ರದರ್ಶಿಸುವ ಮೂಲಕ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮಂಗಳವಾರ ಪದಾರ್ಪಣೆ ಮಾಡಿದವು.

ಯುದ್ಧಕೌಶಲ ಸಾರುವ ‘ಬ್ರಹ್ಮಾಸ್ತ್ರ’ ಎಂಬ ಪ್ರದರ್ಶನವನ್ನು ರಫೇಲ್ ಏಕಾಂಗಿಯಾಗಿಯೇ ಮಾಡಿದರೆ, ನಾಲ್ಕು ಯುದ್ಧವಿಮಾನಗಳೊಂದಿಗೆ ‘ಏಕಲವ್ಯ’ ಪ್ರದರ್ಶನದಲ್ಲಿ ಪಾಲ್ಗೊಂಡು ಗಮನ ಸೆಳೆಯಿತು.

ರಫೇಲ್ ನೇತೃತ್ವದಲ್ಲಿ ಎರಡು ಜಾಗ್ವಾರ್, ಎರಡು ಎಂಐಜಿ–29 ಯುದ್ಧವಿಮಾನಗಳು 300 ಮೀಟರ್ ಎತ್ತರದಲ್ಲಿ ವಿವಿಧ ಸಾಹಸಗಳೊಂದಿಗೆ ಇಂಗ್ಲಿಷ್ ಅಕ್ಷರ ‘ವಿ’ ಆಕಾರದಲ್ಲಿ ನಡೆಸಿದ ಹಾರಾಟ ಮೈನವಿರೇಳಿಸುವಂತಿತ್ತು.

ಭೂಮಿಗೆ ಅತಿ ಹತ್ತಿರದಲ್ಲಿ ಬಂದು, ನಂತರ ಮೇಲ್ಮುಖವಾಗಿ ನೇರವಾಗಿ ನಭಕ್ಕೆ ಚಿಮ್ಮಿದ ರಫೇಲ್, ಬಾನಂಗಳದಲ್ಲಿ ಹಲವು ಪಲ್ಟಿಗಳನ್ನು ಹೊಡೆಯುತ್ತಾ ಮೇಲೆ ಸಾಗಿತು. ನಂತರ ಬಹಳ ಎತ್ತರದಲ್ಲಿ ಹಾರಾಟ ಮುಂದುವರಿಸಿತು. ಈ ಸಾಹಸ ಪ್ರದರ್ಶನವನ್ನು ‘ಬ್ರಹ್ಮಾಸ್ತ್ರ’ ಎಂದು ಕರೆಯಲಾಗುತ್ತದೆ.

ಇತರ ಯುದ್ಧವಿಮಾನಗಳೊಂದಿಗೆ ರಫೇಲ್‌ನ ಪ್ರದರ್ಶನವನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು.

ಫ್ರಾನ್ಸ್‌ನ ಡಾಸೊ ಏವಿಯೇಶನ್ ಕಂಪನಿ ನಿರ್ಮಿಸಿರುವ ರಫೇಲ್ ಯುದ್ಧವಿಮಾನಗಳನ್ನು ಕಳೆದ ವರ್ಷ ಸೆ. 10ರಂದು ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.